ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 18ನೇ ಐಪಿಎಲ್ ಸೀಸನ್ಗೆ ಇದೇ 24 ಮತ್ತು 25ರಂದು ಮಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿನಲ್ಲಿ 10 ಐಪಿಎಲ್ ತಂಡಗಳು ಭಾಗಿಯಾಗಲಿದ್ದು, ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲಿವೆ.
ಐಪಿಎಲ್ ತಂಡಗಳು ರೀಟೈನ್ ಲಿಸ್ಟ್ ಸಲ್ಲಿಸಲು ಅಕ್ಟೋಬರ್ 31ನೇ ತಾರೀಕು ಕೊನೆಯ ದಿನವಾಗಿತ್ತು. ಈಗಾಗಲೇ 10 ಐಪಿಎಲ್ ತಂಡಗಳು ರೀಟೈನ್ ಲಿಸ್ಟ್ ಬಿಸಿಸಿಐಗೆ ಸಲ್ಲಿಸಿವೆ. ಮಾಲೀಕರು ಅಳೆದು ತೂಗಿ ಸ್ಟಾರ್ ಆಟಗಾರರಿಗೆ ಮಣೆ ಹಾಕಿದ್ದಾರೆ. ರಿಲೀಸ್ ಮಾಡಲಾದ ಆಟಗಾರರನ್ನು ಪಟ್ಟಿ ಮಾಡುವ ಕೆಲಸ ಬಿಸಿಸಿಐ ಮಾಡುತ್ತಿದೆ.
ಈ ಬಾರಿ ಹರಾಜಿಗೆ ಸ್ಟಾರ್ ಆಟಗಾರರೇ ಎಂಟ್ರಿ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೈ ಬಿಟ್ಟ ರಿಷಭ್ ಪಂತ್, ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಹೊರ ಬಂದ ಕನ್ನಡಿಗ ಕೆ.ಎಲ್ ರಾಹುಲ್, ಕೆಕೆಆರ್ನಿಂದ ಹೊರಬಿದ್ದ ಶ್ರೇಯಸ್ ಅಯ್ಯರ್, ಮುಂಬೈ ಇಂಡಿಯನ್ಸ್ ಕೈ ಬಿಟ್ಟ ಇಶಾನ್ ಕಿಶನ್ ಸೇರಿ ಹಲವು ಸ್ಟಾರ್ ಆಟಗಾರರು ಮೆಗಾ ಹರಾಜಿಗೆ ಬಂದಿದ್ದಾರೆ.
ಅನ್ಕ್ಯಾಪ್ಡ್ ಸೇರಿದಂತೆ ಬರೋಬ್ಬರಿ 1165 ಮಂದಿ ಭಾರತೀಯ ಆಟಗಾರರು ಐಪಿಎಲ್ ಹರಾಜಿಗೆ ನೋಂದಣಿ ಮಾಡಿಸಿದ್ದಾರೆ. 16 ದೇಶಗಳ ಒಟ್ಟು 409 ಆಟಗಾರರು ಭಾಗವಹಿಸಲಿದ್ದಾರೆ. ಈ ಪೈಕಿ ಇಂಟರ್ ನ್ಯಾಷನಲ್ ಕ್ರಿಕೆಟ್ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿರೋ 272 ಆಟಗಾರರು ಇದ್ದಾರೆ. 104 ಅನ್ಕ್ಯಾಪ್ಡ್ ವಿದೇಶಿ ಆಟಗಾರರು ಹರಾಜು ಅಂಗಳ ಪ್ರವೇಶಿಸಲಿದ್ದಾರೆ.