ಬೆಂಗಳೂರು: ಆಸ್ತಿ ತೆರಿಗೆ ಪಾವತಿಸುವವರಿಗೆ ಇಂದೇ ಕೊನೆಯ ದಿನ. ಕೊನೆಯ ದಿನದ ಅವಧಿ ಮುಗಿದರೆ ಏನಾಗುತ್ತದೆ? ಇಲ್ಲಿದೆ ಡೀಟೈಲ್ಸ್.
2024-25 ನೇ ಸಾಲಿನ ಆಸ್ತಿ ತೆರಿಗೆ ಪಾವತಿಸಲು ಇಂದೇ ಕೊನೆಯ ದಿನ. ಇಂದು ಆಸ್ತಿ ತೆರಿಗೆ ಪಾವತಿ ಮಾಡದೇ ಇದ್ದಲ್ಲಿ 100% ದಂಡ ಪಾವತಿಸಬೇಕಾಗುತ್ತದೆ. ಅಂದರೆ ನಿಮ್ಮ ಆಸ್ತಿ ತೆರಿಗೆ ಮೊತ್ತ ಎಷ್ಟಿದೆಯೋ ಅಷ್ಟೇ ಹೆಚ್ಚುವರಿ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
ಇದರ ಜೊತೆಗೆ 15% ವಾರ್ಷಿಕ ಬಡ್ಡಿಯೂ ಸೇರ್ಪಡೆಯಾಗಲಿದೆ. ನಿಮ್ಮ ಆಸ್ತಿ ತೆರಿಗೆ 1000 ರೂ. ಆಗಿದ್ದರೆ ಇಂದಿನ ಕೊನೆಯ ದಿನಾಂಕ ಮೀರಿದರೆ ದಂಡದ ರೂಪದಲ್ಲಿ 1000 ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಇದರ ಜೊತೆಗೆ 15% ವಾರ್ಷಿಕ ಬಡ್ಡಿ ದರ ಸೇರಿಸಿ ಪಾವತಿ ಮಾಡಬೇಕಾಗುತ್ತದೆ.
ಹೀಗಾಗಿ ಆಸ್ತಿ ತೆರಿಗೆ ಪಾವತಿ ಇನ್ನೂ ಮಾಡದೇ ಇದ್ದಲ್ಲಿ ರಾತ್ರಿ 11 ಗಂಟೆಯವರೆಗೆ ಅವಕಾಶವಿದೆ. ಈ ದಿನ ಮೀರಿದರೆ ನಿಮ್ಮ ಜೇಬಿಗೆ ಕತ್ತರಿ ಹಾಕಲು ಬಿಬಿಎಂಪಿ ಸಿದ್ಧವಾಗಿದೆ.