ಬೆಂಗಳೂರು: ಏಪ್ರಿಲ್ 2ರಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡ ಗುಜರಾತ್ ಟೈಟನ್ಸ್ ಅನ್ನು ಎದುರಿಸಲಿದೆ. ಈ ಹಿನ್ನೆಲೆ ಇಂದು ಆರ್‌ಸಿಬಿ ಆಟಗಾರರು ಬೆಂಗಳೂರಿಗೆ ಬಂದಿಳಿದಿದ್ದಾರೆ.
ನಿನ್ನೆ ಸಿಎಸ್‌ಕೆ ವಿರುದ್ಧ ಚೆನ್ನೈನಲ್ಲಿ ಅಮೋಘ ಜಯ ಗಳಿಸಿದ ಬಳಿಕ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಲಿಕಾನ್ ಸಿಟಿಗೆ ಆಗಮಿಸಿದ್ದಾರೆ.
IPL 18ನೇ ಆವೃತ್ತಿಯಲ್ಲಿ ಇದುವರೆಗೂ ನಡೆದ ಎರಡು ಪಂದ್ಯಾಟದಲ್ಲೂ ಆರ್‌ಸಿಬಿ ಗೆಲುವಿನ ನಗೆಯನ್ನು ಬೀರಿದೆ. ಇದೀಗ ಮುಂದಿನ ಪಂದ್ಯಾಟಲ್ಲೂ ಗೆಲುವು ಸಾಧಿಸುವ ಹುಮ್ಮಸ್ಸಿನೊಂದಿಗೆ ಆರ್‌ಸಿಬಿ ತಮ್ಮ ತವರು ನೆಲಕ್ಕೆ ಬಂದಿಳಿದಿದೆ.
ಕ್ಯಾಪ್ಟನ್ ರಜತ್ ಪಟಿದಾರ್, ಮಾಜಿ ನಾಯಕ ವಿರಾಟ್ ಕೊಹ್ಲಿ, ಕೋಚ್ ದಿನೇಶ್ ಕಾರ್ತಿಕ್ ಸೇರಿದಂತೆ ಎಲ್ಲ ಆಟಗಾರರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆಟಗಾರರು ಹೊಟೇಲ್‌ಗೆ ತೆರಳುವ ವೇಳೆ ಅಭಿಮಾನಿಗಳು ಆರ್‌ಸಿಬಿ, ಈ ಬಾರಿ ಕಪ್ ನಮ್ದೆ, ಕೊಹ್ಲಿ ಎಂಬ ಕೂಗಿನೊಂದಿಗೆ ಅವರನ್ನು ಸ್ವಾಗತಿಸಿದರು.