ಬೆಂಗಳೂರು: ಐಪಿಎಲ್ ಆವೃತ್ತಿಯಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೇ ಅದು ಆರ್‌ಸಿಬಿ. ಇದುವರೆಗೂ ಒಂದು ಬಾರಿಯೂ ಟ್ರೋಫಿಯನ್ನು ಗೆಲ್ಲದಿದ್ದರೂ, ಅಭಿಮಾನಿಗಳ RCB ಕ್ರೇಜ್ ಮಾತ್ರ ಒಂಚೂರು ಕಮ್ಮಿಯಾಗಿಲ್ಲ.
ಐಪಿಎಲ್ ಶುರುವಾಗುವುದೆಂದರೆ ಆರ್‌ಸಿಬಿ ಅಭಿಮಾನಿಗಳಿಗೆ ಹಬ್ಬದ ವಾತಾವರಣ. ಒಂದು ಪಂದ್ಯಾಟ ಮುಗಿದ ಬೆನ್ನಲ್ಲೇ ಅಭಿಮಾನಿಗಳು ಮುಂದಿನ ಪಂದ್ಯಾಟ ಯಾವಾಗ ಎಂದು ಕಾಯುತ್ತಿರುತ್ತಾರೆ. ನಿನ್ನೆ CSK ವಿರುದ್ಧ RCB ಅಮೋಘ ಜಯ ಸಾಧಿಸುತ್ತಿದ್ದ ಹಾಗೇ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಉತ್ತಮ ತಂಡದೊಂದಿಗೆ, 18ನೇ ಆವೃತ್ತಿಯಲ್ಲಿ ಇದುವರೆಗೂ ನಡೆದ ಎರಡು ಪಂದ್ಯಾಟದಲ್ಲೂ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿ, ಗೆಲುವು ಸಾಧಿಸಿದೆ. ಈ ಬಾರಿಯಾದರೂ ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಮುಂದಿನ ಪಂದ್ಯಾಟ ಏಪ್ರಿಲ್ 2ರಂದು ಆರ್‌ಸಿಬಿ ತವರು ನೆಲ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ. ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ ಮುಂದಿನ ಪಂದ್ಯವನ್ನು ಎದುರಿಸಲು ಸಜ್ಜಾಗಿದೆ. ಇದೀಗ ಒಳ್ಳೆಯ ಫಾರ್ಮ್‌ನಲ್ಲಿರುವ ಆರ್‌ಸಿಬಿ ಮುಂದಿನ ಪಂದ್ಯಾಟದಲ್ಲೂ ಗೆಲುವಿನ ಹುಮ್ಮಸ್ಸಿನಲ್ಲಿದೆ.