ಹೈಕೋರ್ಟ್ ಮೆಟ್ಟಿಲೇರಿದ ಬಾಹುಬಲಿ ಪ್ರಭಾಸ್: ಕಾರಣವೇನು ಗೊತ್ತಾ?

ಶನಿವಾರ, 22 ಡಿಸೆಂಬರ್ 2018 (09:24 IST)
ಹೈದರಾಬಾದ್: ಬಾಹುಬಲಿ ಖ್ಯಾತಿಯ ಸ್ಟಾರ್ ಪ್ರಭಾಸ್ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ಗೆಸ್ಟ್ ಹೌಸ್ ಇರುವ ನಿವೇಶನವನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದೇ ಇದಕ್ಕೆ ಕಾರಣ.


ತೆಲಂಗಾಣದ ರಾಯದುರ್ಗದಲ್ಲಿ ಸುಮಾರು 84 ಎಕರೆ ಪ್ರದೇಶವನ್ನು ಸರ್ಕಾರಿ ಜಮೀನು ಎಂಬ ಕಾರಣಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಜಮೀನಿನಲ್ಲಿ ಪ್ರಭಾಸ್ ಗೆ ಸೇರಿದ ಗೆಸ್ಟ್ ಹೌಸ್ ಕೂಡಾ ಸೇರಿತ್ತು.

ಇದನ್ನು ವಶಪಡಿಸಿಕೊಂಡಿರುವ ಕಾರಣ ತಡೆಯಾಜ್ಞೆ ಕೋರಿ ಇದೀಗ ಪ್ರಭಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಯಾವುದೇ ನೋಟಿಸ್ ಇಲ್ಲದೇ ತನಗೆ ಸೇರಿದ ಜಮೀನಿನಲ್ಲಿ ಅಧಿಕಾರಿಗಳು ದಾಂಧಲೆ ನಡೆಸಿದ್ದಾರೆ ಎಂದು ಪ್ರಭಾಸ್ ನ್ಯಾಯಾಲಯಕ್ಕೆ ದೂರಿದ್ದಾರೆ. 2006 ರಲ್ಲಿ ನಿಯಮ ಪ್ರಕಾರವೇ ಈ ಜಮೀನನ್ನು 1.05 ಕೋಟಿ ರೂ.ಗೆ ಖರೀದಿ ಮಾಡಲಾಗಿತ್ತು. ಆದರೆ ಈಗ ಅಧಿಕಾರಿಗಳು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಪ್ರಭಾಸ್ ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಿಚ್ಚ ಸುದೀಪ್ ಹೊಸ ಸಿನಿಮಾ ಟೈಟಲ್ ನೋಡಿಯೇ ಕನ್ ಫ್ಯೂಸ್ ಆದ ಪ್ರೇಕ್ಷಕ