Select Your Language

Notifications

webdunia
webdunia
webdunia
webdunia

ಪಂಚ ಭಾಷೆಯಲ್ಲಿ ಬೇರೆ ಬೇರೆ ದಿನ ಬಿಡುಗಡೆಯಾಗಲಿದೆ ಅವನೇ ಶ್ರೀಮನ್ನಾರಾಯಣ

ಪಂಚ ಭಾಷೆಯಲ್ಲಿ ಬೇರೆ ಬೇರೆ ದಿನ ಬಿಡುಗಡೆಯಾಗಲಿದೆ ಅವನೇ ಶ್ರೀಮನ್ನಾರಾಯಣ
ಬೆಂಗಳೂರು , ಬುಧವಾರ, 18 ಡಿಸೆಂಬರ್ 2019 (08:58 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅವನೇ ಶ್ರೀಮನ್ನಾರಾಯಣ ಡಿಸೆಂಬರ್ 27 ರಂದು ಬಿಡುಗಡೆಯಾಗುತ್ತಿರುವುದಾಗಿ ಚಿತ್ರತಂಡ ಘೋಷಿಸಿರುವುದು ಗೊತ್ತೇ ಇದೆ.


ಈ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿಸೆಂಬರ್ 27 ರಂದು ಕನ್ನಡದಲ್ಲಿ ಸಿನಿಮಾ ಬಿಡುಗಡೆಯಾದರೆ, ಅದಾದ ಬಳಿಕ ನಾಲ್ಕು ಭಾಷೆಗಳಲ್ಲಿ ಬೇರೆ ಬೇರೆ ದಿನಗಳಂದು ಬಿಡುಗಡೆಯಾಗುತ್ತಿದೆ.

ತೆಲುಗಿನಲ್ಲಿ ಜನವರಿ 1 ರಂದು, ತಮಿಳು ಮತ್ತು ಮಲಯಾಳಂನಲ್ಲಿ ಜನವರಿ 3 ರಂದು ಹಾಗೂ ಹಿಂದಿಯಲ್ಲಿ ಜನವರಿ 17 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾ ಬಗ್ಗೆ ಭರ್ಜರಿ ಪ್ರಚಾರ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕರಿಗೆ ಸುವರ್ಣಾವಕಾಶ: ಇದು ಪವರ್ ಸ್ಟಾರ್ ಮೆಚ್ಚಿಕೊಂಡಿರುವ ಚಿತ್ರ!