ಬೆಂಗಳೂರು: ಒಡೆಯ ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬನಾರಸ್ ಕಡೆಗೆ ತೆರಳಿದ್ದಾರೆ.
ಒಡೆಯ ಸಿನಿಮಾ ಬಳಿಕ ದರ್ಶನ್ ‘ರಾಬರ್ಟ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ದರ್ಶನ್ ಬನಾರಸ್ ಗೆ ಚಿತ್ರತಂಡದ ಸಮೇತ ತೆರಳಿದ್ದಾರೆ.
ದರ್ಶನ್ ಜತೆಗೆ ನಟ ಚಿಕ್ಕಣ್ಣ ಕೂಡಾ ಇದ್ದಾರೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಬಳಿಕ ದರ್ಶನ್ ಮದಕರಿನಾಯಕ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.