Publish Date: Wed, 12 Feb 2020 (07:40 IST)
Updated Date: Wed, 12 Feb 2020 (07:42 IST)
ಹೈದರಾಬಾದ್: ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ ಟೀಂ ಇಂಡಿಯಾದ ಕ್ರಿಕೆಟಿಗನ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಕ್ರಿಕೆಟಿಗ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ.
ಅಷ್ಟಕ್ಕೂ ಅನುಷ್ಕಾ ಕೈ ಹಿಡಿಯಲಿರುವ ಕ್ರಿಕೆಟಿಗ ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಆಡುವವರು ಅಲ್ಲ, ಮಾಜಿ ಕ್ರಿಕೆಟಿಗರಿರಬೇಕು ಎಂಬ ಊಹಾಪೋಹಗಳು ಹಬ್ಬಿತ್ತು. ಆದರೆ ಇದೀಗ ಬಂದ ಲೇಟೆಸ್ಟ್ ಸುದ್ದಿಯೆಂದರೆ ಅನುಷ್ಕಾ ದಕ್ಷಿಣ ಭಾರತದ ರಾಜ್ಯವೊಂದರ ಕ್ರಿಕೆಟ್ ತಂಡದ ಪರವಾಗಿ ರಣಜಿ ಕ್ರಿಕೆಟ್ ಆಡುವ ಕ್ರಿಕೆಟಿಗನೊಂದಿಗೆ ವಿವಾಹವಾಗಲಿದ್ದಾರೆ ಎನ್ನಲಾಗಿದೆ.
38 ವರ್ಷದ ಅನುಷ್ಕಾ ಸದ್ಯದಲ್ಲೇ ಕ್ರಿಕೆಟಿಗನ ಜತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಬಗ್ಗೆ ಅನುಷ್ಕಾ ಕಡೆಯಿಂದ ಅಧಿಕೃತ ಹೇಳಿಕೆ ಬರಬೇಕಿದೆಯಷ್ಟೇ.