Publish Date: Wed, 05 Feb 2020 (10:43 IST)
Updated Date: Wed, 05 Feb 2020 (10:45 IST)
ಬೆಂಗಳೂರು: ಕೆಜಿಎಫ್ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್ ರನ್ನು ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಪುತ್ರ, ಯೂಥ್ ಸ್ಟಾರ್ ದುಲ್ಕರ್ ಸಲ್ಮಾನ್ ಭೇಟಿಯಾಗಿದ್ದಾರೆ.
ಈ ಇಬ್ಬರೂ ಯೂಥ್ ಸ್ಟಾರ್ ಗಳು ಭೇಟಿಯಾಗಿರುವುದು ಆಕಸ್ಮಿಕವಾಗಿಯೇ ಅಥವಾ ಈ ಭೇಟಿ ಹಿಂದೆ ಸಿನಿಮಾ ಉದ್ದೇಶವೇನಾದರೂ ಇದೆಯೇ ಎಂಬುದು ಸದ್ಯದ ಕುತೂಹಲವಾಗಿದೆ.
ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳ ಮೂಲಕ ಮನೆ ಮಾತಾಗಿರುವ ಹ್ಯಾಂಡ್ಸಮ್ ದುಲ್ಕರ್ ಮತ್ತು ಮತ್ತೊಬ್ಬ ಹ್ಯಾಂಡ್ಸಮ್ ಹಂಕ್ ಯಶ್ ಜತೆಯಾಗಿ ಸಿನಿಮಾ ಮಾಡಿದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಆದರೆ ಸದ್ಯಕ್ಕೆ ಈ ಬಗ್ಗೆ ಯಾವುದೇ ವಿಚಾರ ಬಂದಿಲ್ಲ. ಅಂತೂ ಇಬ್ಬರೂ ಸ್ಟಾರ್ ಗಳು ಜತೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.