Publish Date: Sat, 03 Sep 2022 (09:30 IST)
Updated Date: Sat, 03 Sep 2022 (09:35 IST)
ಮುಂಬೈ: ಸಿನಿಮಾದಲ್ಲಿ ಮಿಂಚಬೇಕಾದರೆ ಕೇವಲ ಗ್ಲಾಮರ್, ನಾಮಬಲವಿದ್ದರೆ ಸಾಲದು ಎಂಬುದು ಅನನ್ಯಾ ಪಾಂಡೆ ಪಾಲಿಗೆ ಪ್ರೂವ್ ಆಗಿದೆ.
ತಂದೆ-ತಾಯಿಯೂ ಸಿನಿಮಾ ರಂಗದಲ್ಲಿ ಖ್ಯಾತರಾಗಿದ್ದ ಕಾರಣ ಅನನ್ಯಾಗೆ ಸಾಕಷ್ಟು ಅವಕಾಶ ಸಿಕ್ಕಿತ್ತು. ಆದರೆ ಲೈಗರ್ ಸಿನಿಮಾದಲ್ಲಿ ಆಕೆಯ ನಟನೆ ಸಾಕಷ್ಟು ಟ್ರೋಲ್ ಗೊಳಗಾಗಿದೆ.
ಹೀಗಾಗಿ ಅನನ್ಯಾ ಪಾಂಡೆಯನ್ನು ತಮ್ಮ ಸಿನಿಮಾದಲ್ಲಿ ಹಾಕಿಕೊಳ್ಳಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಜೂ.ಎನ್ ಟಿಆರ್ ಜೊತೆಗಿನ ಸಿನಿಮಾವೊಂದಕ್ಕೆ ಅನನ್ಯಾ ನಾಯಕಿ ಎನ್ನಲಾಗಿತ್ತು. ಆದರೆ ಈಗ ಆ ಆಫರ್ ಕೂಡಾ ತಪ್ಪಿಹೋಗುವ ಸಾಧ್ಯತೆಯಿದೆ.