Select Your Language

Notifications

webdunia
webdunia
webdunia
webdunia

ನಟಿ ಅಮೂಲ್ಯ ಅದ್ಧೂರಿ ಸೀಮಂತ

webdunia
ಬೆಂಗಳೂರು , ಶುಕ್ರವಾರ, 21 ಜನವರಿ 2022 (09:17 IST)
Photo Courtesy: Twitter
ಬೆಂಗಳೂರು: ತಾಯಿಯಾಗುತ್ತಿರುವ ನಟಿ ಅಮೂಲ್ಯಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿದೆ. ಈ ಕ್ಷಣಗಳನ್ನು ಅಮೂಲ್ಯ ದಂಪತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಅಮೂಲ್ಯ ತಾವು ತಾಯಿಯಾಗುತ್ತಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೇ ಮೇ ತಿಂಗಳಲ್ಲಿ ಅಮೂಲ್ಯಗೆ ಹೆರಿಗೆಯಾಗಲಿದೆ.

ಇದಕ್ಕೂ ಮೊದಲು ಕುಟುಂಬಸ್ಥರು ಅದ್ಧೂರಿಯಾಗಿ ಸೀಮಂತ ನೆರವೇರಿಸಿದ್ದಾರೆ. ವಿಶೇಷವಾಗಿ ಅಲಂಕಾರಗೊಂಡ ಮಂಟಪದಲ್ಲಿ ಅಮೂಲ್ಯರನ್ನು ಕೂರಿಸಿ ಶಾಸ್ತ್ರಗಳನ್ನು ನೆರವೇರಿಸಲಾಗಿದೆ. ಈ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರು ಭಾಗಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರೋಬ್ಬರಿ 15 ಕೆ.ಜಿ ತೂಕ ಇಳಿಸಿಕೊಳ್ಳಲಿದ್ದಾರಂತೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ