ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀರಿಕೊಂಡ ಬಳಿಕ ಅನೇಕ ಕಲಾವಿದರು ಪುನೀತ್ ನಿವಾಸಕ್ಕೆ ಬಂದು ಸಾಂತ್ವನ ಹೇಳಿ ಹೋಗಿದ್ದಾರೆ. ಇಂದು ಟಾಲಿವುಡ್ ನಟ ಅಲ್ಲು ಶಿರೀಶ್ ಪುನೀತ್ ನಿವಾಸಕ್ಕೆ ಆಗಮಿಸಿದ್ದಾರೆ.
ಸದಾಶಿವನಗರದಲ್ಲಿರುವ ಪುನೀತ್ ನಿವಾಸಕ್ಕೆ ಆಗಮಿಸಿದ ಅಲ್ಲು ಶಿರೀಶ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.
ತೆಲುಗು ನಟ ಅಲ್ಲು ಅರ್ಜುನ್ ಸಹೋದರರಾಗಿರುವ ಅಲ್ಲು ಶಿರೀಶ್ ಅಲ್ಲದೆ, ತಮಿಳು, ತೆಲುಗು ಚಿತ್ರರಂಗದ ಅನೇಕ ಕಲಾವಿದರು ಈಗಾಗಲೇ ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದಾರೆ.