Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಅಭಿಮಾನಿಗೆ ನಟ ಬಾಲಕೃಷ್ಣ ಕಪಾಳಮೋಕ್ಷ

ಮತ್ತೊಮ್ಮೆ ಅಭಿಮಾನಿಗೆ ನಟ ಬಾಲಕೃಷ್ಣ ಕಪಾಳಮೋಕ್ಷ
ಅನಂತಪುರ , ಬುಧವಾರ, 4 ಅಕ್ಟೋಬರ್ 2017 (08:14 IST)
ಅನಂತಪುರ: ತೆಲುಗು ನಟ ನಂದಮೂರಿ ಬಾಲಕೃಷ್ಣ ಮತ್ತೆ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಹಲವು ಬಾರಿ ಸಾರ್ವಜನಿಕವಾಗಿ ಹಲ್ಲೆ ಮಾಡಿರುವ ಫೋಟೋ ವೈರಲ್ ಆಗಿತ್ತು.


ಇದೀಗ ಮತ್ತೊಮ್ಮೆ ಅದೇ ಕೆಲಸ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾಜಕೀಯ ಪ್ರಚಾರ ಸಭೆಯೊಂದರಲ್ಲಿ ನಟ ಕಪಾಳ ಮೋಕ್ಷ ಮಾಡುತ್ತಿರುವುದು ವಿಡಿಯೋದಲ್ಲಿ ಚಿತ್ರೀಕರಣವಾಗಿದೆ.

ನಟ ಬಾಲಕೃಷ್ಣ ಆಡಳಿತಾರೂಢ ಟಿಡಿಪಿ ಪಕ್ಷದ ನಾಯಕರಾಗಿದ್ದಾರೆ. ಹಿಂದೆಯೂ ಎರಡು ಬಾರಿ ಇದೇ ರೀತಿ ಸೆಲ್ಫೀ ಕೇಳಲು ಬಂದ ಅಭಿಮಾನಿ ಕೆನ್ನೆಗೆ ಭಾರಿಸಿ ವಿವಾದಕ್ಕೀಡಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಹುಭಾಷಾ ನಟಿ ಅಪಹರಣ ಪ್ರಕರಣ: ನಟ ದಿಲೀಪ್`ಗೆ ಜಾಮೀನು