Publish Date: Tue, 03 Oct 2017 (14:58 IST)
Updated Date: Tue, 03 Oct 2017 (16:06 IST)
ಬಹುಭಾಷಾ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆಯಾಳಿ ನಟ ದಿಲೀಪ್`ಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಸತ ಐದು ಬಾರಿ ಜಾಮೀನು ನಿರಾಕರಣೆ ಬಳಿಕ 6ನೇ ಬಾರಿ ಜಾಮೀನು ಸಿಕ್ಕಿದೆ. ಅಣ್ಣಾಮಲೈ ಮ್ಯಾಜಿಸ್ಟ್ರೇಟ್ ಎರಡು ಬಾರಿ ಜಾಮೀನು ನಿರಾಕರಿಸಿದ್ದರು. ದಿಲೀಪ್`ಗೆ ಜಾಮೀನು ಕೊಟ್ಟರೆ ಪ್ರಕರಣದ ಮೇಲೆ ಪ್ರಭಾವ ಸಾಧ್ಯತೆ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಸಹ 3 ಬಾರಿ ಜಾಮೀನು ನಿರಾಕರಿಸಿತ್ತು. 85 ದಿನಗಳ ಜೈಲುವಾಸದ ಬಳಿಕ ಇದೀಗ ಕೇರಳ ಹೈಕೋರ್ಟ್ ಜಾಮೀನು ನೀಡಿದೆ.
ನಟ ದಿಲೀಪ್, ಪಲ್ಸಾರ್ ಸುನಿ ಸೇರಿ 6 ಮಂದಿಯನ್ನ ನಟಿಯನ್ನ ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧಿಸಲಾಗಿತ್ತು. ಫೆಬ್ರವರಿ 17ರಂದು ಕೊಚ್ಚಿಯಲ್ಲಿ ಶೂಟಿಂಗ್ ಮುಗಿಸಿ ಕಾರಿನಲ್ಲಿ ಹೊರಟಿದ್ದ ನಟಿಯ ಕಾರು ಅಡ್ಡಗಟ್ಟಿ ಅಪಹರಣ ಮಾಡಲಾಗಿತ್ತು. ಲೈಂಗಿಕ ಕಿರುಕುಳ ನೀಡಿ ಅಜ್ಞಾತ ಸ್ಥಳದಲ್ಲಿ ಬಿಟ್ಟು ಹೋಗಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ