Select Your Language

Notifications

webdunia
webdunia
webdunia
webdunia

ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಲಿರುವ ಹನಿಪ್ರೀತ್

Honeypreet
ನವದೆಹಲಿ , ಮಂಗಳವಾರ, 26 ಸೆಪ್ಟಂಬರ್ 2017 (08:53 IST)
ನವದೆಹಲಿ: ಡೇರಾ ಮುಖ್ಯಸ್ಥ, ಅಪರಾಧಿ ಗುರ್ಮೀತ್ ರಾಮ್ ರಹೀಂ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ನಿರೀಕ್ಷಣಾ ಜಾಮೀನಿಗಾಗಿ ದೆಹಲಿ ಹೈ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ.

ರಾಮ್ ರಹೀಂ ಸಿಂಗ್ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿದ್ದಂತೆ ಹನಿಪ್ರೀತ್ ತಲೆ ಮರೆಸಿಕೊಂಡಿದ್ದಳು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಹನಿಪ್ರೀತ್ ಪರ ವಕೀಲ ಪ್ರದೀಪ್ ಆರ್ಯ, ನಿರೀಕ್ಷಣಾ ಜಾಮೀನು ಅರ್ಜಿಗೆ ಸಹಿ ಹಾಕಲು ದೆಹಲಿಯ ಲಜಪತ್ ನಗರದಲ್ಲಿರುವ ಕಚೇರಿಗೆ ಹನಿಪ್ರೀತ್ ಬಂದಿದ್ದಳು. ಅಲ್ಲದೆ ಆಕೆ ತಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಇಂದು ದೆಹಲಿ ಹೈಕೋರ್ಟ್ ಗೆ ತಮ್ಮ ಕಕ್ಷಿದಾರರ ಪರವಾಗಿ ಜಾಮೀನು ಅರ್ಜಿ ಸಲ್ಲಿಸುವುದಾಗಿ ಆರ್ಯ ತಿಳಿಸಿದ್ದಾರೆ.

ಆದರೆ ಹನಿಪ್ರೀತ್ ಎಲ್ಲಿದ್ದಾಳೆ ಎಂಬುದು ತಿಳಿದಿಲ್ಲ. ರಾಮ್ ರಹೀಂ ಸಿಂಗ್ ವಿರುದ್ಧ ಬಂದಿರುವ ತೀರ್ಪಿನ ಪರವಾಗಿ ತೀವ್ರ ಬೇಸರವಾಗಿದೆ. ಅಲ್ಲದೆ ಬಾಬಾ ಜತೆ ಇಲ್ಲ ಸಲ್ಲದ ಸಂಬಂಧ ಕಲ್ಪಿಸಿರುವ ಬಗ್ಗೆ ಹನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶೀಘ್ರ ವಿಚಾರಣೆಗಾಗಿ ಕೋರ್ಟ್ ನಲ್ಲಿ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

2018ರ ವೇಳೆಗೆ ಪ್ರತಿ ಮನೆಯೂ ಪ್ರಜ್ವಲಿಸಲಿದೆ: ಪ್ರಧಾನಿ ಮೋದಿ