Select Your Language

Notifications

webdunia
webdunia
webdunia
webdunia

ದತ್ತು ಪುತ್ರಿಯನ್ನೂ ಕಾಮತೃಷೆಗೆ ಬಳಸಿಕೊಂಡಿದ್ದನೇ ಡೇರಾ ಮುಖ್ಯಸ್ಥ?!

ದತ್ತು ಪುತ್ರಿಯನ್ನೂ ಕಾಮತೃಷೆಗೆ ಬಳಸಿಕೊಂಡಿದ್ದನೇ ಡೇರಾ ಮುಖ್ಯಸ್ಥ?!
ನವದೆಹಲಿ , ಮಂಗಳವಾರ, 29 ಆಗಸ್ಟ್ 2017 (10:26 IST)
ನವದೆಹಲಿ: ಬಾಬಾ ರಾಮ್ ರಹೀಂ ಸಿಂಗ್ ಕಾಮಕಾಂಡಗಳು ಒಂದೊಂದೇ ಬಹಿರಂಗವಾಗುತ್ತಿದೆ. ಆತನ ದತ್ತು ಪುತ್ರಿಯನ್ನೂ ಕಾಮತೃಷೆಗೆ ಬಳಸಿಕೊಂಡಿದ್ದ ಎಂಬ ಸ್ಪೋಟಕ ಮಾಹಿತಿಯನ್ನು ಅಳಿಯನೇ ಬಿಚ್ಚಿಟ್ಟಿದ್ದಾರೆ.

 
ಬಾಬಾ ಮತ್ತು ಆತನ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ನಡುವೆ ಇಂತಹದ್ದೊಂದು ಸಂಬಂಧವಿತ್ತು ಎನ್ನುವುದನ್ನು ಹನಿಪ್ರೀತ್ ಪತಿ ವಿಶ್ವಾಸ್ ಗುಪ್ತಾ ಬಹಿರಂಗಪಡಿಸಿದ್ದಾರೆ.

ಬಾಬಾ ಬಂಗಲೆ ಗುಫಾದಲ್ಲಿ ಹನಿಪ್ರೀತ್ ಜತೆಗೆ ನಾನು ವಾಸವಿದ್ದೆ. ಒಂದು ದಿನ ಬಾಬಾ ರೂಂ ತೆರೆದಿತ್ತು. ಆಗ ನಾನು ಒಳಗೆ ಇಣುಕಿದಾಗ ಬಾಬಾ ಮತ್ತು ನನ್ನ ಪತ್ನಿ ಹನಿಪ್ರೀತ್ ನಗ್ನ ಸ್ಥಿತಿಯಲ್ಲಿದ್ದರು ಮತ್ತು ಸೆಕ್ಸ್ ನಲ್ಲಿ ತೊಡಗಿದ್ದರು.

ನನ್ನನ್ನು ನೋಡಿ ಭಯಗೊಂಡ ಬಾಬಾ ಯಾರಿಗಾದರೂ ಈ ವಿಷಯ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಬಾಬಾ ಮತ್ತು ಹನಿಪ್ರೀತ್ ಒಂದೇ ರೂಂನಲ್ಲಿ ಮಲಗುತ್ತಿದ್ದರು. ಒಂದು ದಿನವೂ ನನಗೆ ಪತ್ನಿ ಜತೆ ಇರುವ ಅವಕಾಶ ಕೊಡುತ್ತಿರಲಿಲ್ಲ ಎಂದು ಗುಪ್ತಾ ಆರೋಪಿಸಿದ್ದಾಗಿ ಆಂಗ್ಲ ಮಾಧ್ಯಮ ವರದಿ ಮಾಡಿದೆ.

ಆದರೆ ಗುಪ್ತಾ ಆರೋಪವನ್ನು ನಿರಾಧಾರ ಎಂದು ಡೇರಾ ಸಚ್ಚಾ ಮೂಲಗಳು ತಳ್ಳಿ ಹಾಕಿವೆ. ಆದರೆ ಆಕೆ ಸುಂದರವಾಗಿದ್ದಳು ಎಂಬ ಕಾರಣಕ್ಕೇ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಾಬಾ ಆಕೆಯನ್ನು ದತ್ತುಪಡೆದಿದ್ದರು ಎಂದು ಗುಪ್ತಾ ಆರೋಪಿಸಿದ್ದಾರೆ.

ಇದನ್ನೂ ಓದಿ.. ಬಾಬಾ ರಾಂ ರಹೀಂ ಸಿಂಗ್ ಉತ್ತರಾಧಿಕಾರಿಗಾಗಿ ನಡೆಯುತ್ತಿದೆ ಕದನ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಬಾ ರಾಂ ರಹೀಂ ಸಿಂಗ್ ಉತ್ತರಾಧಿಕಾರಿಗಾಗಿ ನಡೆಯುತ್ತಿದೆ ಕದನ?