Publish Date: Tue, 29 Aug 2017 (10:09 IST)
Updated Date: Tue, 29 Aug 2017 (10:12 IST)
ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಬಾ ರಾಮ್ ರಹೀಂ ಸಿಂಗ್ ಅವರ ಉತ್ತರಾಧಿಕಾರಿ ಯಾರು ಎಂಬ ವಿಚಾರದಲ್ಲಿ ಡೇರಾ ಸಚ್ಚಾ ಸಂಸ್ಥೆಯಲ್ಲಿ ದೊಡ್ಡದೊಂದು ಕದನವೇ ಏರ್ಪಟ್ಟಿದೆ ಎನ್ನಲಾಗಿದೆ.
ಡೇರಾ ಮುಖ್ಯಸ್ಥರಾಗಿರುವ ವಿಪಾಸನಾ ಇನ್ಸಾನ್ ಮತ್ತು ಬಾಬಾ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ನಡುವೆ ತೀವ್ರ ಪೈಪೋಟಿಯಿದೆ ಎನ್ನಲಾಗಿದೆ.
ವಿಪಾಸನಾ ತನ್ನ ಬೆಂಬಲಿಗರಿಗೆ ಶಾಂತಿಯಿಂದಿರಲು ಸೂಚಿಸಿದ್ದಾರೆ. ಡೇರಾದಲ್ಲಿ ಎರಡನೇ ಪ್ರಮುಖ ಹುದ್ದೆಯಲ್ಲಿರುವ ವಿಪಾಸನಾಗೆ ಉನ್ನತ ಹುದ್ದೆಗೇರುವ ಮಹತ್ವಾಕಾಂಕ್ಷೆಯಿದೆ. ಹನಿಪ್ರೀತ್ ತಾನು ಬಾಬಾ ಪ್ರೀತಿಯ ಪುತ್ರಿ. ತಾನು ಅಪ್ಪನ ದೇವಕನ್ಯೆ ಹೇಳಿಕೊಳ್ಳುತ್ತಿರುವ ಹನಿಪ್ರೀತ್ ಬಾಬಾ ದತ್ತು ಪುತ್ರಿ. ತಾನೇ ಅಪ್ಪನ ಪ್ರೀತಿ ಪಾತ್ರಳು ಎನ್ನುವ ಹನಿಪ್ರೀತ್ ಗೂ ಹುದ್ದೆ ಮೇಲೆ ಕಣ್ಣಿದೆ.