Select Your Language

Notifications

webdunia
webdunia
webdunia
webdunia

ಟೋಬಿ ನಂತ್ರ ಮತ್ತೊಂದು ಪ್ರಯೋಗಮುಖಿ ಚಿತ್ರಕ್ಕೆ ಕೈ ಹಾಕಿದ 'ರಾಜ್‌ ಬಿ ಶೆಟ್ಟಿ'

ಟೋಬಿ ನಂತ್ರ ಮತ್ತೊಂದು ಪ್ರಯೋಗಮುಖಿ ಚಿತ್ರಕ್ಕೆ ಕೈ ಹಾಕಿದ 'ರಾಜ್‌ ಬಿ ಶೆಟ್ಟಿ'

Sampriya

ಬೆಂಗಳೂರು , ಭಾನುವಾರ, 30 ಜೂನ್ 2024 (12:38 IST)
Photo Courtesy X
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗಮುಖಿ ಸಿನಿಮಾಗಳ ಮೂಲಕ ಮನ  ಗೆದ್ದಿರುವ ನಟ ರಾಜ್ ಬಿ ಶೆಟ್ಟಿ ಇದೀಗ ಮತ್ತೊಂದು ಕಥೆಯೊಂದಿಗೆ ತೆರೆಗೆ ಬರಲು ಸಜ್ಜಾಗುತ್ತಿದ್ದಾರೆ.

ಇನ್ನೂ ಸಿನಿಮಾಗೆ ರೂಪಾಂತರ ಎಂದು ಶೀರ್ಷಿಕೆ ಅಂತಿಮಗೊಂಡಿದ್ದು ಚಿತ್ರದ ಪೋಸ್ಟರ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ. ವಿಶೇಷ ಏನೆಂದರೆ ಈ ಸಿನಿಮಾವು 'ಒಂದು ಮೊಟ್ಟೆ ಕಥೆ' ಚಿತ್ರದ ತಂಡದ ಜತೆ ರಾಜ್ ಬಿ ಶೆಟ್ಟಿ ಮತ್ತೇ ಕೈ ಜೋಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಷಯ ಹಂಚಿಕೊಂಡಿರುವ ಅವರು, 'ಕೆಲ ಸಿನೆಮಾಗಳು ಮನಸ್ಸಿಗೆ ಬಲು ಹತ್ತಿರ. ಅಂತಹ ಒಂದು ಸುಂದರ ಚಿತ್ರ ರೂಪಾಂತರ. ಈ ಸಿನಿಮಾದ ಭಾಗವಾಗಿರುವುದು, ಜತೆಗೆ ಈ ಚಿತ್ರವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಜವಾಬ್ದಾರಿ ನನಗೆ ಲಭಿಸಿರುವುದು ನನ್ನ ವೃತ್ತಿ ಜೀವನದ ಭಾಗ್ಯ. ಈಗ ರೂಪಾಂತರದ ಪೋಸ್ಟರ್‌ ಅನ್ನು ನಿಮ್ಮ ಮುಂದೆ ಬಿಡುಗಡೆಗೊಳಿಸುತ್ತಿದ್ದೇವೆ. ಸದ್ಯದಲ್ಲೇ ಚಿತ್ರವೂ ನಿಮ್ಮ ಮುಂದೆ ಬರಲಿದೆ. ಎಂದಿನಂತೆ ಜೊತೆಗಿರಿ' ಎಂದು ಬರೆದುಕೊಂಡಿದ್ದಾರೆ.

ಒಂದು ಮೊಟ್ಟೆಯ ಕಥೆಯ ನಿರ್ಮಾಪಕರಾದ ಸುಹಾನ್‌ ಪ್ರಸಾದ್‌ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಿಥಿಲೇಶ್‌ ಎಡವಲತ್‌ ಅವರು ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮಿಧುನ್‌ ಮುಕುಂದನ್‌ ಸಂಗೀತವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ಮೂರೇ ದಿವಸಕ್ಕೆ ಗುಡ್‌ ನ್ಯೂಸ್ ಕೊಟ್ರಾ ಸೋನಾಕ್ಷಿ- ಜಹೀರ್ ಇಕ್ಬಾಲ್