Select Your Language

Notifications

webdunia
webdunia
webdunia
webdunia

ರಾಜ್ ಬಿ ಶೆಟ್ಟಿ ಟ್ಯಾಲೆಂಟ್ ನ್ನು ಕನ್ನಡಿಗರು ಸರಿಯಾಗಿ ಬಳಸಿಕೊಂಡಿಲ್ಲ

Raj B Shetty

Krishnaveni K

ಬೆಂಗಳೂರು , ಬುಧವಾರ, 15 ಮೇ 2024 (10:26 IST)
ಬೆಂಗಳೂರು: ಟರ್ಬೋ ಸಿನಿಮಾದ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಪರಭಾಷಿಕರು ಕನ್ನಡ ನಟ ರಾಜ್ ಬಿ ಶೆಟ್ಟಿ ಚಾರ್ಮ್ ಗೆ ಫಿದಾ ಆಗಿದ್ದಾರೆ. ಜೊತೆಗೆ ಕನ್ನಡಿಗರು ಇವರ ಟ್ಯಾಲೆಂಟ್ ನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಕನ್ನಡದಲ್ಲಿ ಹೀರೋ, ಪೋಷಕ ಪಾತ್ರಗಳನ್ನಷ್ಟೇ ಮಾಡಿದ್ದ ರಾಜ್ ಬಿ ಶೆಟ್ಟಿ ಈಗ ಮಲಯಾಳಂನ ಟರ್ಬೋ ಸಿನಿಮಾದಲ್ಲಿ ಖಡಕ್ ವಿಲನ್ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಮುಖ್ಯ ವಿಲನ್ ರಾಜ್ ಬಿ ಶೆಟ್ಟಿ. ಹೀರೋ ಮಮ್ಮುಟ್ಟಿ ಮುಂದೆ ಖಡಕ್ ಡೈಲಾಗ್ ಹೊಡೆದಿದ್ದಾರೆ. ಅವರ ಎಂಟ್ರಿಯೇ ಅದ್ಭುತವಾಗಿದೆ.

ಇದನ್ನು ನೋಡಿ ರಾಜ್ ಬಿ ಶೆಟ್ಟಿಯ ಹೊಸ ಟ್ಯಾಲೆಂಟ್ ಹೊರಬಂದಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ರಾಜ್ ಬಿ ಶೆಟ್ಟಿ ಅದ್ಭುತ ನಟ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅವರ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ಹೊರಗೆಡಹಲು ಇದುವರೆಗೆ ಕನ್ನಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಆದರೆ ಕನ್ನಡದಿಂದ ಮಲಯಾಳಂಗೆ ಹೋಗಿ ಅಲ್ಲಿ ಮಿಂಚುತ್ತಿರುವ ರಾಜ್ ಬಿ ಶೆಟ್ಟಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪರಭಾಷಾ ಸಿನಿಮಾಗಳಲ್ಲಿ ಅವಕಾಶ ಸಿಗುವ ಸಾಧ‍್ಯತೆಯಿದೆ. ಈಗಾಗಲೇ ಟರ್ಬೋ ಟ್ರೈಲರ್ ಮಲಯಾಳಂನಲ್ಲಿ ಮೂರು ಮಿಲಿಯನ್ ವ್ಯೂಗೂ ಅಧಿಕ ವೀಕ್ಷಣೆ ಕಂಡಿದೆ. ಕನ್ನಡದಲ್ಲೂ ರಾಜ್ ಬಿ ಶೆಟ್ಟಿ ಟರ್ಬೋ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ತಮ್ಮದೇ ಲಾಫಿಂಗ್ ಬುದ್ಧ ಕ್ರಿಯೇಷನ್ ಬ್ಯಾನರ್ ನಲ್ಲಿ ಕನ್ನಡದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೃತಧಾರೆ ನಾಯಕಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ