Publish Date: Mon, 13 May 2024 (19:47 IST)
Updated Date: Mon, 13 May 2024 (19:59 IST)
ಬೆಂಗಳೂರು: ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಇಂದು 4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಮುಗಿದಿದೆ. ಇನ್ನೂ ಮತದಾನದಲ್ಲಿ ರಾಜಕೀಯ ಮುಖಂಡರು, ಸೆಲೆಬ್ರಿಟಿಗಳು, ಜನ ಸಾಮಾನ್ಯರು ಸೇರಿದಂತೆ ಗಣ್ಯರು ಭಾಗವಹಿಸಿದರು.
ವಿಶೇಷ ಎಂಬಂತ್ತೆ ಮತಗಟ್ಟೆಗೆ ಬಂದ ಸ್ಟಾರ್ ಸೆಲೆಬ್ರಿಟಿಗಳು ಸಾಮಾನ್ಯರಂತೆಯೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಲ್ಲಿಯೂ ಎಲ್ಲರೂ ಮತ ಚಲಾಯಿಸುವಂತೆ ಕೇಳಿಕೊಂಡರು.
ಇನ್ನೂ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ನಟ ಅಲ್ಲು ಅರ್ಜುನ್ ಮತ್ತು ನಟ ಜ್ಯೂ.ಎನ್‌ಟಿಆರ್ ಮತದಾನ ಮಾಡಿದರು. ಮೆಗಾಸ್ಟಾರ್ ಚಿರಂಜೀವಿ ಪತ್ನಿ ಸುರೇಖಾ ಮತ್ತು ಪುತ್ರಿ ಸುಶ್ಮಿತಾ ಅವರೊಂದಿಗೆ ಮತ ಚಲಾಯಿಸಿದರು.
ಅದಲ್ಲದೆ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರು ಪತ್ನಿ ರಮಾ ಮತ್ತು ಮಗನ ಜೊತೆ ಬಂದು ವೋಟ್ ಮಾಡಿದರು.