Select Your Language

Notifications

webdunia
webdunia
webdunia
webdunia

ಮಮ್ಮುಟ್ಟಿ ಟರ್ಬೋ ಸಿನಿಮಾ ರಿಲೀಸ್, ರಾಜ್ ಬಿ ಶೆಟ್ಟಿ ನಟನೆಗೆ ಮಲಯಾಳಿಗರು ಫಿದಾ

Raj B Shetty

Krishnaveni K

ಬೆಂಗಳೂರು , ಗುರುವಾರ, 23 ಮೇ 2024 (14:07 IST)
ಬೆಂಗಳೂರು: ಮಮ್ಮುಟ್ಟಿ ನಾಯಕರಾಗಿರುವ ಟರ್ಬೋ ಸಿನಿಮಾ ಇಂದು ಥಿಯೇಟರ್ ನಲ್ಲಿ ರಿಲೀಸ್ ಆಗಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಕನ್ನಡಿಗ ರಾಜ್ ಬಿ ಶೆಟ್ಟಿ ಪ್ರಮುಖ ವಿಲನ್ ಪಾತ್ರ ಮಾಡಿದ್ದಾರೆ. ಅವರ ನಟನೆಗೆ ಮಲಯಾಳಿಗರು ಫಿದಾ ಆಗಿದ್ದಾರೆ.

ಟ್ರೈಲರ್ ನಲ್ಲೇ ರಾಜ್ ಬಿ ಶೆಟ್ಟಿ ಖದರ್ ನೋಡಿ ಈ ನಟನನ್ನು ಕನ್ನಡದಲ್ಲಿ ಸರಿಯಾಗಿ ಬಳಸಿಕೊಂಡಿಲ್ಲವೇನೋ ಎಂದು ಎಲ್ಲರೂ ಅನುಮಾನ ಪಟ್ಟಿದ್ದರು. ಯಾಕೆಂದರೆ ಇಲ್ಲಿ ಕೇವಲ ಹೀರೋ, ಹಾಸ್ಯ ನಟನ ಪಾತ್ರ ಮಾಡಿಕೊಂಡಿದ್ದ ರಾಜ್ ಬಿ ಶೆಟ್ಟಿ ತಮಗೂ ವಿಲನ್ ಪಾತ್ರ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಅದೂ ಮಮ್ಮುಟ್ಟಿಯಂತಹ ಮಾಸ್ ಹೀರೋ ಎದುರಿಗೆ ವಿಲನ್ ಆಗಿ ನಟಿಸುವುದು, ಅವರಿಗೆ ಪೈಪೋಟಿ ನೀಡುವಂತೆ ನಟಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ರಾಜ್ ಬಿ ಶೆಟ್ಟಿಯ ನಟನೆ ನೋಡಿದವರು ಈತ ಸಾಮಾನ್ಯ ನಟನಲ್ಲ ಎನ್ನುತ್ತಿದ್ದಾರೆ.

ಕನ್ನಡದಲ್ಲೂ ಟರ್ಬೋ ರಿಲೀಸ್ ಆಗುತ್ತಿದ್ದ ರಾಜ್ ಬಿ ಶೆಟ್ಟಿಯವರ ಲೈಟರ್ ಬುದ್ಧ ಕ್ರಿಯೇಷನ್ಸ್ ಸಿನಿಮಾ ಹಂಚಿಕೆ ಮಾಡುತ್ತಿದೆ. ಇದುವರೆಗೆ ಕನ್ನಡದಲ್ಲಿ ಹಲವು ಪಾತ್ರಗಳನ್ನು ಮಾಡಿ ಮಿಂಚಿದ್ದ ರಾಜ್ ಬಿ ಶೆಟ್ಟಿಗೆ ಈ ಸಿನಿಮಾ ಮೂಲಕ ಪರಭಾಷೆಗಳಲ್ಲೂ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಅವತಾರ ನೋಡಲು ಕಾಯ್ತಿದ್ದಾರೆ ಫ್ಯಾನ್ಸ್