Select Your Language

Notifications

webdunia
webdunia
webdunia
webdunia

ಕನ್ನಡಿಗರ ರಾಜ್ ಬಿ ಶೆಟ್ಟಿಯನ್ನು ಕನ್ನಡದ ಮುತ್ತು ಎಂದ ಮಲಯಾಳಿಗಳು

Raj B Shetty

Krishnaveni K

ಬೆಂಗಳೂರು , ಶುಕ್ರವಾರ, 24 ಮೇ 2024 (12:25 IST)
ಬೆಂಗಳೂರು: ಟರ್ಬೊ ಸಿನಿಮಾ ಮೂಲಕ ಮಲಯಾಳಿ ಪ್ರೇಕ್ಷಕರ ಮನಗೆದ್ದ ಕನ್ನಡ ನಟ ರಾಜ್ ಬಿ ಶೆಟ್ಟಿಗೆ ಈಗ ಹೊಸ ಹೆಸರು ಸಿಕ್ಕಿದೆ. ಟರ್ಬೊ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟನೆ ನೋಡಿ ಮಲಯಾಳಿ ಪ್ರೇಕ್ಷಕರು ಅವರಿಗೆ ಹೊಸ ಟೈಟಲ್ ಕೊಟ್ಟಿದ್ದಾರೆ.

ಟರ್ಬೊ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ವಿಲನ್ ಪಾತ್ರ ಮಾಡಿ ಮಿಂಚಿದ್ದಾರೆ. ವಿಶೇಷವೆಂದರೆ ನಾಯಕ ಮಮ್ಮುಟ್ಟಿ ಇದ್ದರೆ ಅವರ ಎದುರುಗಡೆ ಅವರಿಗೇ ಪೈಪೋಟಿ ನೀಡುವಂತಹ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದ ಈ ಪ್ರತಿಭಾವಂತ ನಟನ ಅಭಿನಯ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇಷ್ಟು ದಿನ ವಿಲನ್ ಗಳೆಂದರೆ ಒಂದೋ ಹಿಂದಿ, ಇಲ್ಲವೇ ತಮಿಳು ನಟರೇ ನೆನಪಾಗುತ್ತಿದ್ದರು. ಆದರೆ ಇದೀಗ ಕನ್ನಡದಲ್ಲಿ ಪೋಷಕ ಪಾತ್ರಗಳು, ಹೀರೋ ಆಗಿ ಮಿಂಚಿದ್ದ ರಾಜ್ ಬಿ ಶೆಟ್ಟಿ ನೆರೆಯ ರಾಜ್ಯಕ್ಕೆ ಹೋಗಿ ವಿಲನ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.

ಎಷ್ಟೆಂದರೆ ಟರ್ಬೊ ಸಿನಿಮಾದ ಸಕ್ಸಸ್ ನ್ನು ರಾಜ್ ಬಿ ಶೆಟ್ಟಿ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಲಯಾಳಿ ಪ್ರೇಕ್ಷಕರು ಕನ್ನಡದ ಮುತ್ತೆ (ಮುದ್ದು) ಎಂದು ಬಿರುದು ಕೊಟ್ಟಿದ್ದಾರೆ. ನಿಮ್ಮ ಈ ಹಿಂದಿನ ಸಿನಿಮಾಗಳನ್ನು ನೋಡಿದ್ದೆವು. ಈ ಸಿನಿಮಾದಲ್ಲಿ ನಿಮ್ಮ ಅಭಿನಯ ಅಂತೂ ಸೂಪರ್ ಎಂದು ಮಲಯಾಳಿ ಪ್ರೇಕ್ಷಕರು ಕನ್ನಡ ನಟನನ್ನು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಸಿನಿಮಾಗಾಗಿ ಶಕ್ತಿ ದೇವತೆಗಳ ದರ್ಶನ ಪಡೆಯುತ್ತಿದ್ದಾರಾ ರಿಷಬ್ ಶೆಟ್ಟಿ