Select Your Language

Notifications

webdunia
webdunia
webdunia
webdunia

ಅವಕಾಶ ಕೊಡ್ತೇವೆ ಹೇಳಿ, ಮಂಚಕ್ಕೆ ಕರೆಯುತ್ತಾರೆ: ಮಲಯಾಳಂ ಚಿತ್ರರಂಗದ ನರಕ ದರ್ಶನದ ಬಗ್ಗೆ ಮೌನ ಮುರಿದ ನಟಿಮಣಿಯರು

Siddiq

Sampriya

ಕೇರಳ , ಮಂಗಳವಾರ, 27 ಆಗಸ್ಟ್ 2024 (15:07 IST)
Photo Courtesy X
ಕೇರಳ: ಹೇಮಾ ಸಮಿತಿಯ ವರದಿಯು ಮಲಯಾಳಂ ಚಲನಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತಿದೆ.

ಈ ವರದಿಯಲ್ಲಿ ಚಲನಚಿತ್ರರಂಗದಲ್ಲಿರುವ ತಾರತಮ್ಯ ಮತ್ತು ಮಹಿಳಾ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಕೆಲಸದ ಸ್ಥಳದಲ್ಲಿರುವ ಭಯಾನಕ ಕಥೆಗಳನ್ನು ಬಿಚ್ಚಿಟ್ಟಿದೆ.

2017 ರಲ್ಲಿ ರಚಿಸಲಾದ ಮೂರು ಸದಸ್ಯರ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಆಗಸ್ಟ್ 19, 2024 ರಂದು ಬಿಡುಗಡೆ ಮಾಡಲಾಯಿತು. ಇದನ್ನು ಮೊದಲು ಡಿಸೆಂಬರ್ 2019 ರಲ್ಲಿ ಕೇರಳ ಸರ್ಕಾರಕ್ಕೆ ಸಲ್ಲಿಸಲಾಯಿತು ಮತ್ತು ಸೀಮಿತ ತಿದ್ದುಪಡಿಗಳೊಂದಿಗೆ ಬಿಡುಗಡೆ ಮಾಡಲಾಯಿತು.

ಕೇರಳ ಮೂಲದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ಅರ್ಜಿಯ ನಂತರ 2017 ರಲ್ಲಿ ಲೈಂಗಿಕ ಕಿರುಕುಳ ಮತ್ತು ಲಿಂಗ ಅಸಮಾನತೆಯ ಸಮಸ್ಯೆಗಳನ್ನು ಅಧ್ಯಯನ ಮಾಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ ಹೇಮಾ, ಮಾಜಿ ನಟಿ ಶಾರದ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಕೆಬಿ ವಲ್ಸಲಾ ಕುಮಾರಿ ಅವರನ್ನು ಒಳಗೊಂಡ ಹೇಮಾ ಸಮಿತಿಯನ್ನು ರಚಿಸಲಾಯಿತು.

ಇದೀಗ ವರದಿ ಹೊರಬರುತ್ತಿದ್ದ ಹಾಗೇ ಮಲಯಾಳಂನ ಖ್ಯಾತ ನಟ, ನಿರ್ಮಾಪಕರು ಮತ್ತು ನಿರ್ದೇಶಕರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬರುತ್ತಿದೆ.

ಸಮಿತಿಯ ವರದಿ ಬಿಡುಗಡೆಯಾದ ನಂತರ ಕಿರಿಯ ಕಲಾವಿದೆಯೊಬ್ಬರು ನಟ ಮತ್ತು ನಿರ್ದೇಶಕ ಬಾಬುರಾಜ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ನಿರ್ದೇಶಕರೊಂದಿಗೆ ಚರ್ಚೆಯ ನೆಪದಲ್ಲಿ ಕರೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿಮ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಕಲಾವಿದೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮಲಯಾಳಂ ಚಲನಚಿತ್ರ ನಟರ ಸಂಘದ (ಅಮ್ಮ) ಜಂಟಿ ಕಾರ್ಯದರ್ಶಿ ಬಾಬುರಾಜ್ ಅವರು ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ಮಾಧ್ಯಮ ವರದಿಗಳ ಪ್ರಕಾರ ಅವರ ಆರೋಪದ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸುತ್ತಾರೆ.

ಇನ್ನೂ ಮಲಯಾಳಂನ ಖ್ಯಾತಿ ಹಿರಿಯ ನಟ ಸಿದ್ದಿಕ್ ವಿರುದ್ಧ ನಟಿಯೊಬ್ಬರು ಆರೋಪ ಮಾಡಿ, ಅವಕಾಶ ನೀಡುವುದಾಗಿ ನನ್ನನ್ನು ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಆರೋಪದ ಬೆನ್ನಲ್ಲೇ ಸಿದ್ದಿಕ್ ಅವರು ಅಮ್ಮಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ.

ನಟಿ ಮಿನು ಮುನೀರ್ ಅವರು ವಿವಿಧ ನಟರು ಸೇರಿದಂತೆ ಕೇರಳ ಅಸೆಂಬ್ಲಿಯಲ್ಲಿ ಎರಡು ಬಾರಿ ಸಿಪಿಐ(ಎಂ)  ಶಾಸಕರು ಕೂಡಾ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದೊಡ್ಡ ಬಾಂಬ್ ಸಿಡಿಸಿದ್ದಾರೆ.

ಮುನೀರ್ ಅವರು ನಟರಾದ ಮುಖೇಶ್, ಜಯಸೂರ್ಯ, ಮಣಿಯನ್ಪಿಳ್ಳ ರಾಜು ಮತ್ತು ಅಮ್ಮಾ ಪ್ರಮುಖ ನಾಯಕ ಎಡವೇಲ ಬಾಬು ಅವರನ್ನು ಹೆಸರಿಸಿದ್ದಾರೆ. ಮುನೀರ್ ಅವರ ಹೇಳಿಕೆಗಳಿಗೆ ಮುಖೇಶ್, ಜಯಸೂರ್ಯ ಮತ್ತು ಬಾಬು ಪ್ರತಿಕ್ರಿಯಿಸದಿದ್ದರೂ, ಆರೋಪಗಳ ತನಿಖೆಯನ್ನು ಸ್ವಾಗತಿಸುವುದಾಗಿ ರಾಜು ಹೇಳಿದರು.

ಭಾನುವಾರ, ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರು ನಿರ್ದೇಶಕ ರಂಜಿತ್ ಮೇಲೆ ಗಂಭೀರ ಆರೋಪ ಮಾಡಿ 2009 ರಲ್ಲಿ 'ಪಲೇರಿ ಮಾಣಿಕ್ಯಂ' ಚಿತ್ರದ ಆಡಿಷನ್‌ ವೇಳೆ ಅನುಚಿತವಾಗಿ ವರ್ತಿಸುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.

ನಟಿ ಗೀತಾ ವಿಜಯನ್ ಅವರು 1991 ರಲ್ಲಿ ನಿರ್ದೇಶಕ ತುಳಸಿದಾಸ್ ಅವರ ‘ಚಂಚಟ್ಟನ್’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನನಗೆ ಕೆಟ್ಟ ಅನುಭವವಾಯಿತು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಿನಿಮಾದ ಚಿತ್ರೀಕರಣದ ವೇಳೆ ಆತ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಹೇಳಿದ್ದಾಳೆ.

ಮತ್ತೊಬ್ಬ ನಟಿ ಶ್ರೀವೇದಿಕಾ ಕೂಡ ತುಳಸಿದಾಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 2006 ರ 'ಅವನ್ ಚಂಡಿಯುತೆ ಮಗನ್' ಚಿತ್ರದ ಸೆಟ್‌ಗಳಲ್ಲಿ ಅವನು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಅವರು ಹೇಳಿದರು

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ರದ್ದು ತಪ್ಪು ಅಂತ ಯಾಕೆ ಹೇಳ್ತಿದ್ದೀರಿ: ಮಾಧ್ಯಮಗಳ ಮೇಲೆ ಸುಮಲತಾ ಗರಂ