Select Your Language

Notifications

webdunia
webdunia
webdunia
webdunia

ದರ್ಶನ್ ರದ್ದು ತಪ್ಪು ಅಂತ ಯಾಕೆ ಹೇಳ್ತಿದ್ದೀರಿ: ಮಾಧ್ಯಮಗಳ ಮೇಲೆ ಸುಮಲತಾ ಗರಂ

Sumalatha Ambareesh

Krishnaveni K

ಬೆಂಗಳೂರು , ಮಂಗಳವಾರ, 27 ಆಗಸ್ಟ್ 2024 (14:46 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರಾಜಾತಿಥ್ಯದ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಮಾಧ್ಯಮಗಳ ಮೇಲೇ ಹರಿಹಾಯ್ದಿದ್ದಾರೆ.

ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಮಾಧ್ಯಮಗಳು ಕಳೆದ ಎರಡು ದಿನಗಳಿಂದ ನಿರಂತರವಾಗಿ ವರದಿ ಮಾಡುತ್ತಲೇ ಇವೆ. ಈ ಬಗ್ಗೆ ಸುಮಲತಾರನ್ನು ಇಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ. ಈ ವೇಳೆ ಅವರು ಗರಂ ಆಗಿ ಮಾಧ್ಯಮಗಳನ್ನೇ ಪ್ರಶ್ನೆ ಮಾಡಿದ್ದಾರೆ. ದರ್ಶನ್ ಇರುವುದಕ್ಕೇ ಹೈಲೈಟ್ ಮಾಡ್ತಿದ್ದೀರಾ ಎಂದಿದ್ದಾರೆ.

‘ನಾನು ಮಾಧ್ಯಮಗಳಿಗೂ ಒಂದು ಪ್ರಶ್ನೆ ಮಾಡಬೇಕಿದೆ. ಜೈಲಿನಲ್ಲಿ ಈ ರೀತಿ ನಡೀತಿದೆ ಎಂದು ಇದೇ ಮೊದಲಾ ಎಂದು ನೀವೇ ಎದೆ ಮುಟ್ಕೊಂಡು ಪ್ರಶ್ನೆ ಮಾಡಿ. ಎಷ್ಟು ವರ್ಷಗಳಿಂದ ಈ ರೀತಿ ನಡೀತಾ ಇದೆ? ಯಾಕೆ ನೀವು ಹೈಲೈಟ್ ಮಾಡ್ತಿದ್ದೀರಿ? ದರ್ಶನ್ ಇರೋದರಿಂದ ನೀವು ಅದನ್ನು ಫೋಕಸ್ ಮಾಡಿ ಅವರೇ ತಪ್ಪು ಅನ್ನೋ ತರ ಬಿಂಬಿತವಾಗುತ್ತಿದೆ. ಇದಕ್ಕೆ ಮೊದಲು ಆಫೀಸರ್ ರೂಪ ಇದರ ಬಗ್ಗೆ ಗಮನ ಸೆಳೆದಾಗ ನೀವು ಯಾಕೆ ಹೈಲೈಟ್ ಮಾಡಿಲ್ಲ? ದರ್ಶನ್ ಇರೋದಕ್ಕೆ ಹೈಲೈಟ್ ಮಾಡ್ತಿದ್ದೀರಾ’ ಎಂದು ಗರಂ ಆಗಿ ಪ್ರಶ್ನೆ ಮಾಡಿದ್ದಾರೆ.

‘ಜೈಲಿನಲ್ಲಿದ್ದವರು ಕ್ರಿಮಿನಲ್ ಗಳೇ ಆಗಿರ್ತಾರೆ. ಅಲ್ಲಿರುವ ಕಾರಣಕ್ಕೆ ದರ್ಶನ್ ಅವರ ಜೊತೆಯೇ ಇರಬೇಕಾಗುತ್ತದೆ. ಇದರಲ್ಲಿ ಏನು ತಪ್ಪು? ನೀವು ಹೇಳುವ ರೀತಿ ನೋಡಿದರೆ ಅವರು ಅಲ್ಲಿ ಯಾರ ಜೊತೆಗೂ ಮಾತನಾಡಬಾರದು ಎನ್ನೋ ರೀತಿ ಇದೆ’ ಎಂದು ಸುಮಲತಾ ವ್ಯಂಗ್ಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಮಾ ಸೂಪರ್‌ಹಿಟ್‌ ಬೆನ್ನಲ್ಲೇ ಹೊಸ ಸಿನಿಮಾ ಘೋಷಣೆ ಮಾಡಿದ ದುನಿಯಾ ವಿಜಯ್‌