Select Your Language

Notifications

webdunia
webdunia
webdunia
webdunia

Casting couch: ಅವಳ ಅಂದಿನ ಹೋರಾಟಕ್ಕೆ ಇಂದು ಫಲ ಸಿಗುತ್ತಿದೆ ಎಂದ ನಟಿ ಮಂಜು ವಾರಿಯರ್

Manju Warrier

Sampriya

ಕೇರಳ , ಭಾನುವಾರ, 25 ಆಗಸ್ಟ್ 2024 (17:08 IST)
Photo Courtesy X
ಕೇರಳ: ಚಿತ್ರರಂಗದಲ್ಲಿನ ತಪ್ಪುಗಳ ವಿರುದ್ಧ ಧ್ವನಿಯೆತ್ತಿ ಬದುಕುಳಿದವರಿಗೆ ಮಲಯಾಳಂ ನಟಿ ಮಂಜು ವಾರಿಯರ್ ಬೆಂಬಲ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಹಿರಿಯ ನಟ ಸಿದ್ಧಿಕ್  ಹಾಗೂ ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ , ನಿರ್ದೇಶ ರಂಜಿತ್ ವಿರುದ್ಧ ಮಹಿಳೆಯರಿಬ್ಬರು ಲೈಂಗಿನ ದೌರ್ಜನ್ಯ ಎಸಗಿದ ಬಗ್ಗೆ ಆರೋಪ ವ್ಯಕ್ತಪಡಿಸಿದ ಬೆನ್ನಲ್ಲೇ ನಟಿ ಮಂಜು ಅವರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.  "ಇದೆಲ್ಲವನ್ನೂ ನಾವು ಮರೆಯಬಾರದು ಏಕೆಂದರೆ ಒಬ್ಬ ಮಹಿಳೆ ನಿಜವಾಗಿಯೂ ಹೋರಾಡುವ ಧೈರ್ಯವನ್ನು ಹೊಂದಿದ್ದಳು."

ಅಮ್ಮನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಟ ಸಿದ್ದಿಕ್ ರಾಜೀನಾಮೆ ಮತ್ತು ಕೇರಳ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶಕ ರಂಜಿತ್ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಪೋಸ್ಟ್ ಬಂದಿದೆ.

ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರು ರಂಜಿತ್ ವಿರುದ್ಧ ಮಾಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಶ್ರೀಲೇಖಾ ಅವರು ಗಂಭೀರ ಆರೋಪ ಮಾಡಿ, 2009-10 ರ ಚಲನಚಿತ್ರ 'ಪಲೇರಿ ಮಾಣಿಕ್ಯಂ' ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಮಿತ್ರಾ, ಚಿತ್ರೀಕರಣದ ಸಮಯದಲ್ಲಿ ರಂಜಿತ್ ಅನುಚಿತ ವರ್ತನೆಯನ್ನು ಆರೋಪಿಸಿದರು. ಇದು ನನಗೆ ಭಯ ಮತ್ತು ನೋವನ್ನು ಉಂಟು ಮಾಡಿತು. ರಂಜಿತ್‌ ಅವರ ನಡೆ ನನಗೆ ಅಸುರಕ್ಷಿತವಾಗಿತ್ತು ಎಂದು ಹೇಳಿಕೊಂಡಿದ್ದರು.

2016ರಲ್ಲಿ ನಟ ಸಿದ್ಧಿಕ್ ಅವರು ತನಗೆ ಕಿರುಕುಳ ನೀಡಿರುವುದಾಗಿ  ನಟಿ ರೇವತಿ ಸಂಪತ್ ಅವರು ಗಂಭೀರ ಆರೋಪ ಮಾಡಿದ್ದರು. ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ ಆಕೆ ತನ್ನ ಹಕ್ಕುಗಳನ್ನು ಪುನರುಚ್ಚರಿಸಿದಳು, ಸಿದ್ದಿಕ್ ತನಗೆ ಚಲನಚಿತ್ರ ಪಾತ್ರವನ್ನು ಆಫರ್ ಮಾಡಿದ ನಂತರ ತಿರುವನಂತಪುರಂನ ಮಸ್ಕಟ್ ಹೋಟೆಲ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಿದ್ದಾರೆ.

ಹೇಮಾ ಸಮಿತಿ ವರದಿ ಹೊರಬಿದ್ದಿರುವ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಪ್ರಮುಖರ ವಿರುದ್ಧ ಇನ್ನಷ್ಟು ಆರೋಪಗಳು ಕೇಳಿ ಬರುತ್ತಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್‌ ಜೈಲಿನಲ್ಲಿರುವ ಮೊದಲ ಫೋಟೋ ವೈರಲ್, ಸೆರೆಮನೆಯಲ್ಲಿ ಅರಮನೆಯಂತಿರುವ ದಾಸ