Select Your Language

Notifications

webdunia
webdunia
webdunia
webdunia

ಹೊಸ ಉದ್ಯಮದ ಬೆನ್ನಲ್ಲೇ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾದ ಸುದರ್ಶನ ಭಟ್ ಬೆದ್ರಡಿ

sudarshan bhat bedradi

Sampriya

ಬೆಂಗಳೂರು , ಭಾನುವಾರ, 25 ಆಗಸ್ಟ್ 2024 (12:04 IST)
Photo Courtesy X
ಬೆಂಗಳೂರು: ಭಟ್ 'ಎನ್' ಭಟ್ ಹೆಸರಿನಲ್ಲಿ ಕರಾವಳಿಯ ಜಿಲ್ಲೆಯ ಆಹಾರವನ್ನು ವಿಭಿನ್ನ ನಿರೂಪಣಾ ಶೈಲಿಯ ಮೂಲಕ ಮನೆ ಮಾತಗಿರುವ ಸುದರ್ಶನ ಭಟ್ ಬೆದ್ರಾಡಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಇವರ ನಿಶ್ಚಿತಾರ್ಥ ಈಚೆಗೆ ಕುಟುಂಬದವರ ಸಮ್ಮುಖದಲ್ಲಿ ನೆರವೇರಿತು. ನಿಶ್ಚಿತಾರ್ಥ ಫೋಟೋಗಲು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶುಭಕೋರಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಸುದರ್ಶನ್ ಭಟ್ ಮತ್ತು ಮನೋಹರ ಭಟ್ ಬೆದ್ರಡಿ ಆರಂಭಿಸಿದ ಭಟ್ 'ಎನ್' ಭಟ್ ಯೂಟ್ಯೂಬ್ ಚಾನೆಲ್ ಮೂಲಕ ಭಾರೀ ಖ್ಯಾತಿಯನ್ನು ಗಳಿಸಿದರು. ವೃತ್ತಿಯಲ್ಲಿ ವಕೀಲರಾಗಿದ್ದರು, ಇವರು ಹವ್ಯಾಸವಾಗಿ ಅಡುಗೆ ಮಾಡಿ ತೋರಿಸುತ್ತಿದ್ದರು.

ಅದಲ್ಲದೆ ಈ ಅವಳಿ ಸಹೋದರರು ಈಚೆಗೆ ಹೊಸ ಉದ್ಯಮವಾಗಿ ತಾವು ತಯಾರಿಸುವ ಸಾಂಬಾರ್ ಪೌಡರ್ ಮತ್ತು ಉಪ್ಪಿನಕಾಯಿ ಮಾರಾಟಕ್ಕೆ ಹೊಸ ಅಂಗಡಿಯನ್ನು ತೆರೆದರು.

ಇದೀಗ ಸುರದರ್ಶನ್ ಭಟ್ ಬೆದ್ರಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಶೀಘ್ರದಲ್ಲೇ ಕೃತಿ ಜತೆ ಸಪ್ತಪದಿ ತುಳಿಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣನ ಬಳಿಕ ಕನ್ನಡದ ಮತ್ತೊಬ್ಬ ನಟನೊಂದಿಗೆ ತೆರೆ ಹಂಚಿಕೊಳ್ಳಲಿರುವ ರಜನಿಕಾಂತ್‌