Select Your Language

Notifications

webdunia
webdunia
webdunia
webdunia

ದರ್ಶನ್‌ ಜೈಲಿನಲ್ಲಿರುವ ಮೊದಲ ಫೋಟೋ ವೈರಲ್, ಸೆರೆಮನೆಯಲ್ಲಿ ಅರಮನೆಯಂತಿರುವ ದಾಸ

Darshan

Sampriya

ಬೆಂಗಳೂರು , ಭಾನುವಾರ, 25 ಆಗಸ್ಟ್ 2024 (15:59 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಜೈಲಿನಲ್ಲಿ ವಿಐಪಿ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ ಎನ್ನುವ ಸಾಕ್ಷಿಯಾಗಿ ಇದೀಗ ಫೋಟೋವೊಂದು ವೈರಲ್ ಆಗುತ್ತಿದೆ.

ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಎರಡೂವರೆ ತಿಂಗಳು ಆಗಿಬರುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ಜೈಲಿನಲ್ಲಿ ದರ್ಶನ್‌ವಿರುವ ಫೋಟೋವನ್ನು ಬಿಡುಗಡೆ ಮಾಡಲಾಗಿದೆ.

ಸ್ಪೇಷಲ್ ಬ್ಯಾರಕ್ ಹೊರಗೆ ನಟ ದರ್ಶನ್ ಕುಳಿತಿರುವ ಫೋಟೋ ವೈರಲ್ ಆಗಿದೆ. ದರ್ಶನ್ ಅವರ ಜತೆ ರೌಡಿ ವಿಲ್ಸನ್ ಗಾರ್ಡನ್ ನಾಗ, ರೇಣುಕಾಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ್ ಜತೆ ಕೂತು ಕೈಯಲ್ಲಿ ಸಿಗರೇಟ್ ಹಿಡಿದು ಕಾಫಿ ಲೋಟವನ್ನು ಹಿಡಿದುಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ಸಿಸಿಬಿ ದಾಳಿ ಮಾಡಿದ್ದ ಸಂದರ್ಭದಲ್ಲಿ ಈ ಫೋಟೋ ತೆಗೆಯಲಾಗಿತ್ತು ಎನ್ನಲಾಗಿದೆ.

ಇದೀಗ ಕೊಲೆ ಪ್ರಕರಣದಲ್ಲಿ ಹೋಗಿರುವ ಆರೋಪಿಗೆ ಈ ರೀತಿ ರಾಜಾತಿಥ್ಯವನ್ನು ನೀಡುತ್ತಿರುವುದಕ್ಕೆ ಭಾರೀ ಆಕ್ರೋಶ ಹೊರಬರುತ್ತಿದ್ದು, ಇದಕ್ಕೆ ಗೃಹಸಚಿವರು ಸ್ಪಷ್ಪನೆ ನೀಡಬೇಕೆಂದು ಒತ್ತಾಯ ವ್ಯಕ್ತವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಲಿವುಡ್‌ನಲ್ಲಿ ಮತ್ತೊಂದು ಕರಾಳ ಘಟನೆ: ಹಿರಿಯ ನಟನಿಂದಲೇ ಲೈಂಗಿಕ ದೌರ್ಜನ್ಯವಾಗಿದೆ ಎಂದ ನಟಿ