Publish Date: Wed, 27 Jan 2021 (07:46 IST)
Updated Date: Wed, 27 Jan 2021 (07:47 IST)
ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ನಟಿ ಶ್ರುತಿ ಹಾಶನ್ ಕೂಡ ಒಬ್ಬರು. ಹಲವು ಸಮಯದವರೆಗೆ ಚಿತ್ರರಂಗದಿಂದ ಬ್ರೇಕ್ ಪಡೆದ ನಟಿ ಮತ್ತೆ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂವಹನ ನಡೆಸಿದ್ದು, ಆ ವೇಳೆ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದಾರಂತೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶ್ರುತಿ ಹಾಸನ್ ಅವರ ಜೀವನ ಮತ್ತು ವೃತ್ತಿ, ಪ್ರೇಮ ವಿಷಯಗಳ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಅಭಿಮಾನಿಯೊಬ್ಬರು ಶ್ರುತಿ ಹಾಸನ್ ಬಳಿ ಪ್ರೀತಿಯ ಬಗ್ಗೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟಿ ನಿಜ ನಾನು ಪ್ರೀತಿಸುತ್ತಿದ್ದೇನೆ ಎಂದು ತಿಳಿಸುವುದರ ಮೂಲಕ ತಾವು ಮತ್ತೆ ಪ್ರೀತಿಸುತ್ತಿರುವುದಾಗಿ ಸುಳಿವು ನೀಡಿದ್ದಾರಂತೆ. ಹಾಗಾಗಿ ಅವರ ಪ್ರೇಮಿ ಯಾರು ಎಂಬ ಚರ್ಚೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.