ಚೆನ್ನೈ : ಮಾಸ್ಟರ್ ವಿಜಯ್ ಅವರ ವೃತ್ತಿ ಜೀವನದ 64ನೇ ಚಿತ್ರವಾಗಿದೆ. 65ನೇ ಚಿತ್ರವನ್ನು ದಿಲೀಪ್ ನೆಲ್ಸನ್ ಕುಮಾರ್ ನಿರ್ದೇಶಿಸಲಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಲಾಗಿದೆ. ಈ ನಡುವೆ ಇದೀಗ ವಿಜಯ್ ಅವರು 66ನೇ ಚಿತ್ರದ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಪ್ರತಿಭಾನ್ವಿತ ನಿರ್ದೇಶಕ ಎಚ್.ವಿನೋದ್ ಅವರು ವಿಜಯ್ ಅವರ 66ನೇ ಚಿತ್ರವನ್ನು ನಿರ್ದೇಶಿಸಲು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ನಿರ್ದೇಶಕ ಎಚ್.ವಿನೋದ್ ಅವರು ಅಜಿತ್ ಅವರ ವಲಿಮೈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಅವರು ವಿಜಯ್ ಜೊತೆ ರಾಜಕೀಯಕ್ಕೆ ಸಂಬಂಧಪಟ್ಟ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಆ ವೇಳೆ ವಿಜಯ್ ಮುರುಗದಾಸ್ ನಿರ್ದೇಶನದ ಸರ್ಕಾರ್ ಚಿತ್ರ ಮಾಡುತ್ತಿದ್ದರು. ಹೀಗಾಗಿ ಇದೀಗ ಇವರಿಬ್ಬರು ಜೊತೆಯಾಗಿ ನಿಸಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.