ಹೈದರಾಬಾದ್ : ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿದ್ದ ತಾಂಡವ್ ವೆಬ್ ಸರಣಿ ತಯಾರಕರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಈ ವೆಬ್ ಸರಣಿಯಲ್ಲಿ ಹಿಂದೂ ದೇವರುಗಳ ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿದ್ದರಿಂದ ಅವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ತಾಂಡವ್ ತಯಾರಕರು ಕ್ಷಮೆಯಾಚಿಸಿ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಿದ್ದಾರೆ. ಈ ಮೂಲಕ ಈ ವಿವಾದ ಇತ್ಯರ್ಥವಾಗಿದೆ ಎನ್ನಲಾಗಿತ್ತು.
ಆದರೆ ಮಹಾರಾಷ್ಟ್ರದ ಕರ್ಣಿ ಸೇನಾ ಮುಖ್ಯಸ್ಥ ಅಜಯ್ ಸೆಂಗಾರ್, ತಾಂಡವ್ ವೆಬ್ ಸರಣಿಯಲ್ಲಿ ಹಿಂದೂ ದೇವರುಗಳ ಬಗ್ಗೆ ಅಸಭ್ಯ ಹೇಳಿಕೆ ನೀಡಿದವರ ನಾಲಿಗೆ ಕತ್ತರಿಸಿದವರಿಗೆ ಕೋಟಿ ರೂಪಾಯಿ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಅವರ ಕ್ಷಮೆ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.