Publish Date: Sun, 10 Jan 2021 (09:03 IST)
Updated Date: Sun, 10 Jan 2021 (09:05 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಫೇಸ್ ಬುಕ್ ಪುಟದಲ್ಲಿ ಲೈವ್ ಆಗಿ ಅಭಿಮಾನಿಗಳೊಂದಿಗೆ ಮಾತನಾಡಲಿದ್ದಾರೆ. ಈ ದಿನ ಅವರು ರಾಬರ್ಟ್ ಬಿಡುಗಡೆ ದಿನಾಂಕವನ್ನು ಘೋಷಿಸಬಹುದು ಎಂದು ಊಹಿಸಲಾಗಿದೆ.
ಸಾಮಾನ್ಯವಾಗಿ ದರ್ಶನ್ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಆಗಿ ಬರುವುದು ಅಪರೂಪ. ಅದೂ ಐದು ವರ್ಷಗಳ ಬಳಿಕ ಫೇಸ್ ಬುಕ್ ಮುಖಾಂತರ ಲೈವ್ ಬರುತ್ತಿದ್ದಾರೆ ಎನ್ನುವುದು ವಿಶೇಷ. ಹೀಗಾಗಿ ದರ್ಶನ್ ವಿಶೇಷ ಸುದ್ದಿಯನ್ನು ಹೇಳಲೆಂದೇ ಲೈವ್ ಬರುತ್ತಿರಬಹುದು ಎನ್ನಲಾಗಿದೆ. ಅಂದ ಹಾಗೆ ಇಂದು ಬೆಳಿಗ್ಗೆ 11 ಗಂಟೆಗೆ ದರ್ಶನ್ ಫೇಸ್ ಬುಕ್ ಪುಟವನ್ನು ನೀವು ವೀಕ್ಷಿಸಬಹುದು.