Select Your Language

Notifications

webdunia
webdunia
webdunia
webdunia

ಗ್ಲಾಮರಸ್ ನಟಿ ಶ್ರುತಿ ಹಾಸನ್ ತಾಯಿ ಪಾತ್ರ ಮಾಡಿದ್ದು ಸರಿಯೇ? ಅದಕ್ಕೆ ನಟಿ ಹೇಳಿದ್ದೇನು?

ಗ್ಲಾಮರಸ್ ನಟಿ ಶ್ರುತಿ ಹಾಸನ್ ತಾಯಿ ಪಾತ್ರ ಮಾಡಿದ್ದು ಸರಿಯೇ? ಅದಕ್ಕೆ ನಟಿ ಹೇಳಿದ್ದೇನು?
ಚೆನ್ನೈ , ಶುಕ್ರವಾರ, 22 ಜನವರಿ 2021 (12:30 IST)
ಚೆನ್ನೈ :ಸಾಮಾನ್ಯವಾಗಿ ನಟಿಯರು ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಲು ಇಷ್ಟಪಡುತ್ತಾರೆ. ಆದರೆ ನಟ ಕಮಲ್ ಹಾಸನ್ ಅವರ ಪುತ್ರಿ ಖ್ಯಾತ ನಟಿ ಶ್ರುತಿ ಹಾಸನ್ ಅವರು ತಾಯಿ ಪಾತ್ರದಲ್ಲಿ ನಟಿಸಿದ್ದು ಇದೀಗ ಬಿಸಿ ವಿಷಯವಾಗಿ ಭಾರಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಹೌದು. ಕ್ರ್ಯಾಕ್ ಚಿತ್ರದಲ್ಲಿ ಹತ್ತು ವರ್ಷ ಹುಡುಗನ ತಾಯಿಯಾಗಿ ನಟಿ ಶ್ರುತಿ ಹಾಸನ್ ನಟಿಸಿದ್ದಾರೆ. ಇದು ಸರಿಯೇ? ಎಂದು ನೆಟಿಜನ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟಿ ಶ್ರುತಿ ಹಾಸನ್ ಅವರು, ಅದು ಏಕೆ ತಪ್ಪು ಎಂದು ನನಗೆ ಅರ್ಥವಾಗುತ್ತಿಲ್ಲ. ನನಗೆ ನಾಯಕಿ ಪಾತ್ರದಷ್ಟೇ ತಾಯಿ ಮಾತ್ರವೂ ಮುಖ್ಯ. ಅದನ್ನು ನಾನು ಮಾಡಲು ಸಿದ್ಧ. ನಟಿಯಾಗಿ ನಾನು ಯಾವಾಗಲೂ ಹೊಸತನ್ನು ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಮಹೇಶ್ ಬಾಬು ಫಿಟ್ ನೆಸ್ ರಹಸ್ಯ ಬಯಲು!