Select Your Language

Notifications

webdunia
webdunia
webdunia
webdunia

ಈ ಕಾರಣದಿಂದ ಸ್ಥಗಿತಗೊಳ್ಳಲಿದೆಯಾ ರಜನೀಕಾಂತ್ ‘ಅನ್ನಾಥಾ’ ಚಿತ್ರ

ಈ ಕಾರಣದಿಂದ ಸ್ಥಗಿತಗೊಳ್ಳಲಿದೆಯಾ ರಜನೀಕಾಂತ್ ‘ಅನ್ನಾಥಾ’ ಚಿತ್ರ
ಚೆನ್ನೈ , ಶನಿವಾರ, 23 ಜನವರಿ 2021 (12:28 IST)
ಚೆನ್ನೈ : ‘ಅನ್ನಥಾ’ ಶಿವ ನಿರ್ದೇಶನದ , ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಚಿತ್ರವಾಗಿದೆ. ಈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪುನರಾರಂಭಗೊಂಡಿತ್ತು. ಹಾಗಾಗಿ ಈ ಚಿತ್ರವು ಫೆಬ್ರವರಿಯಲ್ಲಿ ಶೂಟಿಂಗ್ ಮುಗಿಸಿ ಮಾರ್ಚ್ ಅಥವಾ ಎಪ್ರಿಲ್ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇತ್ತು.

ಆದರೆ ಶೂಟಿಂಗ್ ಸಮಯದಲ್ಲಿ ರಜನೀಕಾಂತ್ ಅವರ ಆರೋಗ್ಯ ಸಮಸ್ಯೆಗಳಿಂದಾಗಿ ಶುಟಿಂಗ್ ಸ್ಥಗಿತಗೊಂಡಿದೆ. ರಜನೀಕಾಂತ್ ಅವರು ವಿದೇಶಕ್ಕೆ ಹೋಗಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಅವರು ಅಲ್ಲಿಂದ ಬರಲು ತುಂಬಾ ಸಮಯ ತೆಗೆದುಕೊಳ್ಳುವ  ಸಾಧ್ಯತೆ ಇದೆ.

ಅಲ್ಲದೇ ಮತ್ತೊಂದು ಕಡೆ ನಿರ್ದೇಶಕ ಶಿವ, ನಟ ಸೂರ್ಯರೊಂದಿಗೆ  ಮತ್ತೊಂದು ಚಿತ್ರ ನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ. ಅದರ ಚಿತ್ರೀಕರಣ ಪ್ರಾರಂಭಿಸುವ ನಿರೀಕ್ಷೆ ಇದೆ. ಹಾಗಾಗಿ ಅನ್ನಾಥಾ ಚಿತ್ರ ಬಹಳ ವಿಳಂಬವಾಗುವ ಸಂಭವವಿದೆ ಎನ್ನಲಾಗಿದೆ. ಇದು ರಜನೀಕಾಂತ್ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ ಗೆ ಎದುರಾಳಿಯಾಗಿ ನಿಲ್ಲಲಿದ್ದಾರಾ ವಿಜಯ್ ಸೇತುಪತಿ?