Publish Date: Sat, 23 Jan 2021 (11:32 IST)
Updated Date: Sat, 23 Jan 2021 (11:36 IST)
ಹೈದರಾಬಾದ್ : ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಜೊತೆ ನಟ ಪ್ರಭಾಸ್ ಅವರ ಸಲಾರ್ ಚಿತ್ರ ಘೋಷಣೆಯಾಗಿದೆ. ಇದೀಗ ಈ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕಾಗಿ ಕಲಾವಿದರ ಹೆಸರನ್ನು ಆರಿಸಲಾಗುತ್ತಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಅವರು ತಮಿಳು ನಟ ವಿಜಯ್ ಸೇತುಪತಿ ಅವರನ್ನು ಖಳನಾಯಕನ ಪಾತ್ರಕ್ಕಾಗಿ ಆಂತಿಮಗೊಳಿಸಿದ್ದಾರೆ. ಇದರ ಶೂಟಿಂಗ್ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದೆ. ಆದರೆ ನಟ ವಿಜಯ್ ಸೇತುಪತಿ ಅವರು ಟಾಲಿವುಡ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಮತ್ತೊಂದು ಚಿತ್ರದಲ್ಲಿ ಅವರ ಹೆಸರು ಆಯ್ಕೆಯಾಗಿದೆ. ಹಾಗಾಗಿ ಇವೆರಡು ಚಿತ್ರಗಳಲ್ಲಿ ವಿಜಯ್ ಸೇತುಪತಿ ಯಾವುದನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಅಲ್ಲದೇ ಈ ಚಿತ್ರದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ.