Select Your Language

Notifications

webdunia
webdunia
webdunia
Friday, 11 April 2025
webdunia

ಸೋಶಿಯಲ್ ಮೀಡಿಯಾದಲ್ಲಿ ಈ ಕಾರಣಕ್ಕೆ ಸಿಂಬು-ಧನುಷ್ ಅಭಿಮಾನಿಗಳ ನಡುವೆ ನಡೆಯುತ್ತಿದೆ ಘರ್ಷಣೆ

ಚೆನ್ನೈ
ಚೆನ್ನೈ , ಸೋಮವಾರ, 25 ಜನವರಿ 2021 (10:44 IST)
ಚೆನ್ನೈ : ತಮ್ಮ ನೆಚ್ಚಿನ ನಟನನ್ನು ಹೊಗಳುವ ಮೂಲಕ ಇಬ್ಬರು ಸ್ಟಾರ್ ನಟರ  ಅಭಿಮಾನಿಗಳ ನಡುವೆ ಘರ್ಷಣೆ ನಡೆಯುವುದು ಸಹಜ. ಇದು ಎಲ್ಲಾ ಚಿತ್ರರಂಗದಲ್ಲೂ ನಡೆಯುತ್ತದೆ. ಅದೇರೀತಿ ಇದೀಗ ತಮಿಳು ನಟ ಸಿಂಬು ಹಾಗೂ ಧನುಷ್ ಅಭಿಮಾನಿಗಳ ನಡುವೆ ಘರ್ಷಣೆಯಾಗುತ್ತಿದೆ.

ನಟ ಸಿಂಬು ಅವರ ಇತ್ತೀಚೆಗೆ ಬಿಡುಗಡೆಯಾದ ‘ಈಶ್ವರನ್’ ಚಿತ್ರದ ಸಂಭಾಷಣೆಯೊಂದರಲ್ಲಿ ಧನುಷ್ ಅವರ ‘ಅಸುರನ್’ ಚಿತ್ರದ ಬಗ್ಗೆ ಮಾತನಾಡಲಾಗಿದೆ ಎನ್ನಲಾಗಿದೆ. ಇದಕ್ಕೆ  ಧನುಷ್ ಅಭಿಮಾನಿಗಳು ತಮ್ಮ ನಟನಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಆದರೆ ಈ ನಡುವೆ ಇದೀಗ ನಟ ಧನುಷ್ ಅವರು ತಮ್ಮ ಟ್ವೀಟರ್ ನಲ್ಲಿ  ‘ಅಸುರನ್/ನಟ’ ಎಂದು ಬರೆದುಕೊಂಡಿದ್ದಾರೆ. ಇದು ಸಿಂಬು ಸಂಭಾಷಣೆಯ ಕುರಿತಾಗಿ ತಿಳಿಸಲಾಗಿದೆ ಎಂದು ಸಿಂಬು ಅಭಿಮಾನಿಗಳು ಆಕ್ರೋಶಗೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಯುದ್ಧ ನಡೆಯುತ್ತಿದೆ ಎನ್ನಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಹೊಸ ಮುಖ ಪರಿಚಯಿಸಲಿದ್ದಾರಂತೆ ಪ್ರಶಾಂತ್ ನೀಲ್