Publish Date: Sun, 03 Jul 2022 (16:43 IST)
Updated Date: Sun, 03 Jul 2022 (16:45 IST)
ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದು 6 ವರ್ಷದ ಪುಟ್ಟ ಬಾಲಕಿ ಸಮನ್ವಿ ಪೋಷಕರ ಮೊಗದಲ್ಲಿ ಈಗ ಹೊಸ ಜೀವಕಳೆ ಬಂದಿದೆ.
ಇದಕ್ಕೆ ಕಾರಣ, ಸಮನ್ವಿ ತಾಯಿ, ನಟಿ ಅಮೃತಾ ಈಗ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಸಮನ್ವಿ ಅಪಘಾತವಾಗುವಾಗ ಅಮೃತಾ ಗರ್ಭಿಣಿಯಾಗಿದ್ದರು.
ಇದೀಗ ಅಮೃತಾ ಮತ್ತು ರೂಪೇಶ್ ದಂಪತಿ ಗಂಡು ಮಗುವಿಗೆ ಜನ್ಮವಿತ್ತಿದ್ದು, ಸಮನ್ವಿ ಕಳೆದುಕೊಂಡ ನೋವಿನಲ್ಲಿದ್ದ ಕುಟುಂಬಕ್ಕೆ ಹೊಸ ಭರವಸೆ ಸಿಕ್ಕಿದೆ. ಈ ಖುಷಿಯ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಮೃತಾ ಎಲ್ಲರ ಹಾರೈಕೆಗೆ ಧನ್ಯವಾದ ಸಲ್ಲಿಸಿದ್ದಾರೆ.