ಹೈದರಾಬಾದ್ : ಟಾಲಿವುಡ್ ನಟ, ರಾಜಕಾರಣಿ ನಂದ ಮೂರಿ ಬಾಲಕೃಷ್ಣ ಅವರು ಹೈದರಾಬಾದ್ ಐಷಾರಾಮಿ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ 15 ಕೋಟಿ ಮನೆ ಖರೀದಿಸಿದ್ದಾರೆ.
ಈ ಮನೆ ನೆಲ ಮಹಡಿ ಮತ್ತು ಎರಡು ಮಗಡಿಗಳನ್ನು ಹೊಂದಿದ್ದು ಒಟ್ಟು 9,935 ಚದರ ಅಡಿ ವಿಸ್ತೀರ್ಣವಿದೆ ಎಂಬುದಾಗಿ ತಿಳಿದುಬಂದಿದೆ. ಬಾಲಕೃಷ್ಣ ಮತ್ತು ಅವರ ಪತ್ನಿ ನಂದಮೂರಿ ವಸುಂಧರಾ ದೇವಿ ಜಂಟಿಯಾಗಿ ಆಸ್ತಿ ಖರೀದಿಸಿದ್ದಾರೆ ಎಂದು ದಾಖಲೆಗಳಿಂದ ತಿಳಿದುಬಂದಿದೆ. ಈಗಾಗಲೇ ಬಾಲಕೃಷ್ಣ ಅವರು ಜುಬಲಿ ಬೆಟ್ಟದ ರಸ್ತೆ ಸಂಖ್ಯೆ 1ರಲ್ಲಿ ಮನೆ ಹೊಂದಿದ್ದು, ಇದು ಅವರ ಎರಡನೇ ಮನೆಯಾಗಿದೆ ಎನ್ನಲಾಗಿದೆ.