Publish Date: Sat, 27 Feb 2021 (09:25 IST)
Updated Date: Sat, 27 Feb 2021 (09:27 IST)
ಹಾಪುರ : ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ 30 ವರ್ಷದ ಮಹಿಳೆಯನ್ನು ಮೂವರು ಅಪಹರಿಸಿ ಸಾಮೂಹಿಕ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
ಮಹಿಳೆ ಶೂ ರೂಂ ಕೆಲಸ ಮುಗಿಸಿ ಆಟೋರಿಕ್ಷಾ ಹತ್ತಿದ್ದಾಗ ಆಟೋ ಡ್ರೈವರ್ ಮತ್ತು ಆತನ ಇಬ್ಬರು ಸಹಚರರು ಮಹಿಳೆಯನ್ನು ಅಪಹರಿಸಿ ಇಂತಹ ಘೋರ ಕೃತ್ಯ ಎಸಗಿ ಆಕೆಯನ್ನು ಎಸೆದು ಹೋಗಿದ್ದಾರೆ. ಈ ಬಗ್ಗೆ ಮಹಿಳೆ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.