Publish Date: Sat, 27 Feb 2021 (10:33 IST)
Updated Date: Sat, 27 Feb 2021 (10:35 IST)
ಹೈದರಾಬಾದ್: ರಾಬರ್ಟ್ ತೆಲುಗು ಅವತರಣಿಕೆಯ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ನಿನ್ನೆ ಹೈದರಾಬಾದ್ ನಲ್ಲಿ ನಡೆದಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಬರ್ಟ್ ಚಿತ್ರತಂಡವನ್ನು ತೆಲುಗು ನಟ ಜಗಪತಿ ಬಾಬು ಹಾಡಿಹೊಗಳಿದ್ದಾರೆ.
ಜಗಪತಿ ಬಾಬು ಈ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಗಪತಿಬಾಬು ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಹಾಡಿಹೊಗಳಿದ್ದಾರೆ. ಎಲ್ಲರೂ ನಟನಾಗ್ತಾರೆ. ಆದರೆ ದರ್ಶನ್ ನಿಜ ಜೀವನದಲ್ಲೂ ಹೀರೋ. ರಾಬರ್ಟ್ ಚಿತ್ರೀಕರಣ ಸಮಯದಲ್ಲಿ ನನ್ನನ್ನು ಅಷ್ಟು ಅದ್ಧೂರಿಯಾಗಿ ಸ್ವಾಗತಿಸಿದರು. ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಮುಂದೆ ಕನ್ನಡದಲ್ಲಿ ನಿಮ್ಮ ನಿರ್ದೇಶನದಲ್ಲಿ ಯಾವುದೇ ಸಿನಿಮಾ ಮಾಡುವುದಿದ್ದರೂ ನನಗೆ ಒಂದು ಮಾತು ಹೇಳಿದರೆ ಸಾಕು. ಬಂದು ಮಾಡಿಕೊಡ್ತೇನೆ. ಅಷ್ಟು ಒಳ್ಳೆಯ ತಂಡವಿದು ಎಂದು ಜಗಪತಿಬಾಬು ಹೊಗಳಿದ್ದಾರೆ.