Publish Date: Thu, 25 Feb 2021 (11:03 IST)
Updated Date: Thu, 25 Feb 2021 (11:05 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ಡಿ ಬಾಸ್ ದರ್ಶನ್ ಇಬ್ಬರೂ ಸ್ಯಾಂಡಲ್ ವುಡ್ ನ ಮಾಸ್ ಹೀರೋಗಳು. ಇಬ್ಬರೂ ಜೋಡೆತ್ತುಗಳು ಜೊತೆಯಾಗಿ ಸಿನಿಮಾ ಮಾಡಿದರೆ ಹೇಗಿರುತ್ತೆ?
ಈ ಬಗ್ಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದೊಂದು ದಿನ ಯಶ್-ದರ್ಶನ್ ಒಟ್ಟಿಗೆ ಸಿನಿಮಾ ಮಾಡಬಹುದಾ ಎಂಬ ಪ್ರಶ್ನೆಗೆ ದರ್ಶನ್ ನಮ್ ಹೀರೋ ಜೊತೆ ಸಿನಿಮಾ ಮಾಡಕ್ಕೆ ನಂಗೇನು? ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳೂ ಖುಷಿಯಾಗಿದ್ದಾರೆ.