Publish Date: Thu, 25 Feb 2021 (09:16 IST)
Updated Date: Thu, 25 Feb 2021 (09:17 IST)
ಬೆಂಗಳೂರು: ದರ್ಶನ್-ಜಗ್ಗೇಶ್ ಫ್ಯಾನ್ಸ್ ವಾರ್ ಇನ್ನೂ ನಿಂತಿಲ್ಲ. ನಿನ್ನೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ನಟ ಜಗ್ಗೇಶ್ ನೇರವಾಗಿಯೇ ದರ್ಶನ್ ಮೇಲೆ ತಮ್ಮ ಬೇಸರ ಹೊರಹಾಕಿದ್ದಾರೆ.
ಇಷ್ಟೆಲ್ಲಾ ಆದ ಬಳಿಕ ದರ್ಶನ್ ನನಗೆ ಒಂದು ಕರೆ ಮಾಡಬಹುದಿತ್ತು. ಅಥವಾ ಆ ಹುಡುಗರಿಗೆ ಕರೆ ಮಾಡಿ ಬುದ್ಧಿ ಹೇಳಬಹುದಿತ್ತು. ಆದರೆ ಮಾಡಿಲ್ಲ. ನಮ್ಮಂಥಾ ಹಿರಿಯರ ದೌರ್ಬಾಗ್ಯ ಇದು. ಅಂದು ದರ್ಶನ್ ರನ್ನು ಪೊಲೀಸರು ಬಂಧಿಸಿ ಬರಿಗಾಲಲ್ಲಿ ನಿಲ್ಲಿಸಿದಾಗ ಬೆಂಬಲ ಕೊಟ್ಟವನು ನಾನೇ. ನನ್ನ ಜೊತೆಗೆ ಸಾ ರಾ ಗೋವಿಂದು ಇದ್ದರು. ನಾನು ಸ್ಟೇಷನ್ ನಲ್ಲಿ ಅವನಿಗಾಗಿ ಕಿರುಚಾಡಿದ್ದೆ. ಮೂರು ಕೋಟಿ ಬ್ಯುಸಿನೆಸ್ ತಂದುಕೊಡುವ ನಟ ಎಂದು ವಾದಿಸಿದ್ದೆ. ಅಂದಿನ ಗೃಹ ಸಚಿವ ಆರ್ ಅಶೋಕ್ ಜೊತೆ ದರ್ಶನ್ ಗಾಗಿ ಮಾತನಾಡಿದ್ದೆ. ಇದನ್ನು ಆತನೂ ನೆನಪು ಮಾಡಿಕೊಳ್ಳಬೇಕಿತ್ತು. ಇದೆಲ್ಲಾ ನೆನಪಿಗೆ ಬರಲ್ವಾ? ಎಂದು ಜಗ್ಗೇಶ್ ಬೇಸರ ಹೊರಹಾಕಿದ್ದಾರೆ.