Select Your Language

Notifications

webdunia
webdunia
webdunia
Thursday, 10 April 2025
webdunia

ಕೊರೋನಾದಿಂದ ಮೃತರಾದವರ ಅಸ್ಥಿ ವಿಸರ್ಜಿಸಿದ ನಟ ಅರ್ಜುನ್ ಗೌಡ

ಅರ್ಜುನ್ ಗೌಡ
ಬೆಂಗಳೂರು , ಭಾನುವಾರ, 13 ಜೂನ್ 2021 (09:54 IST)
ಬೆಂಗಳೂರು: ಕೊರೋನಾ ಪ್ರಕರಣಗಳು ಮಿತಿಮೀರಿದ್ದಾಗ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡಿ ಎಷ್ಟೋ ಜನರ ಪ್ರಾಣ ಉಳಿಸಲು ನೆರವಾಗಿದ್ದ ಯುವ ನಟ ಅರ್ಜುನ್ ಗೌಡ ಈಗ ಮತ್ತೊಂದು ಮಹತ್ಕಾರ್ಯ ಮಾಡಿ ಸುದ್ದಿಯಾಗಿದ್ದಾರೆ.


ತಮ್ಮ ಆಂಬ್ಯುಲೆನ್ಸ್ ನಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಿದ್ದಷ್ಟೇ ಅಲ್ಲದೆ, ಹಲವರ ಮೃತದೇಹಗಳನ್ನು ಮನೆಯವರೇ ಹತ್ತಿರ ಬಾರದೇ ಇದ್ದಾಗ ಖುದ್ದಾಗಿ ಅಂತ್ಯ ಸಂಸ್ಕಾರ ಮಾಡಲು ನೆರವಾಗಿದ್ದರು.

ಅಂತಹ ಮೃತದೇಹಗಳ ಚಿತಾಭಸ್ಮವನ್ನು ತೆಗೆದಿಟ್ಟುಕೊಂಡಿದ್ದ ಅರ್ಜುನ್ ಗೌಡ ಅದೆಲ್ಲವನ್ನೂ ಕಾಶಿಯ ಗಂಗೆಯಲ್ಲಿ ವಿಸರ್ಜಿಸಿದ್ದಾರೆ. ಈ ಮೂಲಕ ಮೃತ ಆತ್ಮಗಳಿಗೆ ತಮ್ಮ ಕೈಲಾದ ರೀತಿಯಲ್ಲಿ ಚಿರಶಾಂತಿ ಒದಗಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರೀನಾ ಕಪೂರ್ ಸೀತೆ ಪಾತ್ರ ಮಾಡಿದ್ರೆ ಹುಷಾರ್!