Publish Date: Mon, 10 Aug 2020 (10:41 IST)
Updated Date: Mon, 10 Aug 2020 (10:43 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ದಂಪತಿಗೆ ಅಭಿಷೇಕ್ ಅಂಬರೀಶ್ ಏಕೈಕ ಮುದ್ದಿನ ಮಗ ಇರಬಹುದು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಅಂಬಿ ದಂಪತಿ ದತ್ತು ಮಗನಂತೇ ನೋಡುತ್ತಿದ್ದವರು.
ಇಂದು ದರ್ಶನ್ ಸಿನಿಮಾ ರಂಗಕ್ಕೆ ಕಾಲಿಟ್ಟು 23 ವರ್ಷಗಳಾಗಿದ್ದು, ಅವರ ಅಭಿಮಾನಿಗಳು ವಿಶೇಷ ಸಿಡಿಪಿ ಮೂಲಕ ತಮ್ಮ ಮೆಚ್ಚಿನ ನಟನ ವಿಶೇಷ ದಿನವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.
ವಿಶೇಷ ಸಿಡಿಪಿ ಬಿಡುಗಡೆಗೊಳಿಸಿದ ಅಭಿಷೇಕ್ ಅಂಬರೀಶ್, ದರ್ಶನ್ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. ನಿನ್ನಂಥ ಅಣ್ಣ ನನಗೆ ಸಿಕ್ಕಿರೋದೇ ನನ್ನ ಸೌಭಾಗ್ಯ. ನಿನಗೆ ನೀನೇ ಸಾಟಿ. ನಿನ್ನಂತೆ ಇನ್ನೊಬ್ಬರು ಇರಲು ಸಾಧ‍್ಯವಿಲ್ಲ ಎಂದು ಬರೆದುಕೊಂಡಿರುವ ಅಭಿ, 23 ವರ್ಷಗಳ ಸಿನಿ ಪಯಣಕ್ಕೆ ಶುಭ ಹಾರೈಸಿದ್ದಾರೆ.