Publish Date: Sun, 09 Aug 2020 (12:24 IST)
Updated Date: Sun, 09 Aug 2020 (12:27 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಈಗ ಅಪ್ಪನ ಹಾದಿಯಲ್ಲೇ ನಡೆಯುವ ಲಕ್ಷಣ ಗೋಚರಿಸುತ್ತಿದೆ. ದರ್ಶನ್ ಗೆ ಪ್ರಾಣಿಗಳು ಅದರಲ್ಲೂ ಕುದುರೆಗಳ ಮೇಲೆ ವಿಶೇಷ ಪ್ರೀತಿ. ಇದೀಗ ವಿನೀತ್ ಕೂಡಾ ಅದೇ ಹಾದಿಯಲ್ಲಿದ್ದಾನೆ.
ವಿನೀತ್ ಗೆ ದರ್ಶನ್ ಖುದ್ದಾಗಿ ಕುದುರೆ ಸವಾರಿ ಕಲಿಸುವ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ವಿನೀಶ್ ಕೊನೆಗೂ ಏಕಾಂಗಿಯಾಗಿ ಸವಾರಿ ಮಾಡುವುದನ್ನು ಕಲಿತುಕೊಂಡಿದ್ದಾನೆ.
ವಿನೀಶ್ ಫಾರ್ಮ್ ಹೌಸ್ ನಲ್ಲಿ ಕುದುರೆ ಸವಾರಿ ಮಾಡುವ ದೃಶ್ಯಗಳು ವೈರಲ್ ಆಗಿವೆ. ಈ ಮೂಲಕ ಅಪ್ಪನಂತೇ ಕುದುರೆ ಸವಾರಿ ಪ್ರವೀಣನಾಗಿದ್ದಾನೆ.