Publish Date: Mon, 10 Aug 2020 (09:37 IST)
Updated Date: Mon, 10 Aug 2020 (09:39 IST)
ಬೆಂಗಳೂರು: ಒಂದು ಕಾಲದಲ್ಲಿ ಕುಚಿಕುಗಳಾಗಿದ್ದ ಕಿಚ್ಚ ಸುದೀಪ್ ಮತ್ತು ದರ್ಶನ್ ಈಗ ದೂರ ದೂರವಾಗಿದ್ದಾರೆ. ಇದೀಗ ಇಬ್ಬರೂ ಸ್ಟಾರ್ ಗಳ ಅಭಿಮಾನಿಗಳು ಸಮಯ ಸಿಕ್ಕಾಗಲೆಲ್ಲಾ ಬಲ ಪ್ರದರ್ಶನ ಮಾಡುವುದೂ ಹೊಸದೇನಲ್ಲ.
ಇಂದು ಅಂತಹದ್ದೇ ಒಂದು ಜಿದ್ದಾಜಿದ್ದಿಗೆ ವೇದಿಕೆ ಸಿದ್ಧವಾಗಿದೆ. ಇಂದು ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಇದು ಇಂದು ಬೆಳಿಗ್ಗೆ 10 ಗಂಟೆಗೆ ಲಾಂಚ್ ಆಗಲಿದೆ.
ಇದೇ ಸಮಯಕ್ಕೆ ಅಂದರೆ ಬೆಳಿಗ್ಗೆ 10 ಗಂಟೆಗೆ ಡಿ ಬಾಸ್ ದರ್ಶನ್ ಅಭಿಮಾನಿಗಳೂ ದರ್ಶನ್ ಸಿನಿಮಾ ರಂಗದಲ್ಲಿ 23 ವರ್ಷ ಪೂರೈಸಿದ ಸಂಭ್ರಮವನ್ನು ಹೊಸ ಸಿಡಿಪಿ ಬಿಡುಗಡೆ ಮಾಡುವ ಮೂಲಕ ಆಚರಿಸುತ್ತಿದ್ದಾರೆ. ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ‍್, ನೆನಪಿರಲಿ ಪ್ರೇಮ್ ಹಾಗೂ ಪ್ರಜ್ವಲ್ ದೇವರಾಜ್ ಈ ಸಿಡಿಪಿಯನ್ನು ಬಿಡುಗಡೆ ಮಾಡುತ್ತಿದ್ದಾರೆ.
ಈ ಮೂಲಕ ಎರಡೂ ಸ್ಟಾರ್ ಗಳ ಅಭಿಮಾನಿಗಳ ನಡುವೆ ಒಂದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಆಗೋದಂತೂ ಖಂಡಿತಾ. ಹಾಗಾಗಿ ಮತ್ತೆ ಯಾರು ಹೆಚ್ಚು ವ್ಯೂ ಪಡೆದರು, ಲೈಕ್ ಪಡೆದರು ಎಂಬ ವಿಚಾರವಾಗಿ ಜಿದ್ದಾಜಿದ್ದಿಯೂ ಗ್ಯಾರಂಟಿ.
Krishnaveni K
Publish Date: Mon, 10 Aug 2020 (09:37 IST)
Updated Date: Mon, 10 Aug 2020 (09:39 IST)