Publish Date: Wed, 01 Jun 2022 (09:30 IST)
Updated Date: Wed, 01 Jun 2022 (09:33 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ ಪ್ರಿ ಬುಕಿಂಗ್ ಇಂದಿನಿಂದ ಬುಕ್ ಮೈ ಶೋನಲ್ಲಿ ಆರಂಭವಾಗಿದೆ.
ಚಾರ್ಲಿ ಎಂಬ ನಾಯಿ ಮತ್ತು ಧರ್ಮ ನಡುವಿನ ಕತೆಯಿರುವ ಈ ಸಿನಿಮಾ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಹೀಗಾಗಿ ಪ್ರಿ ಬುಕಿಂಗ್ ಗೆ ಭರ್ಜರಿ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ.
ಜೂನ್ 10 ರಂದು ಸಿನಿಮಾ ಎಲ್ಲೆಡೆ ಥಿಯೇಟರ್ ಗಳಲ್ಲಿ ತೆರೆ ಕಾಣಲಿದೆ. ಅದಕ್ಕಿಂತ ಮೊದಲು ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಜೂನ್ 6 ರಿಂದ 21 ನಗರಗಳಲ್ಲಿ ಪ್ರೀಮಿಯರ್ ಶೋ ಆಯೋಜನೆಯಾಗಿದೆ. ಇದಕ್ಕೆ ಸೀಮಿತ ಸೀಟ್ ಗಳು ಲಭ್‍ಯವಿದ್ದು, ಆರಂಭದಲ್ಲಿ ಬುಕಿಂಗ್ ಮಾಡಿದವರಿಗೆ ಆದ್ಯತೆ ಸಿಗಲಿದೆ.