ಬೆಂಗಳೂರು: ಇತ್ತೀಚೆಗೆ ಎಲ್ಲಿ ನೋಡಿದರೂ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಕಾರುಬಾರು. ಇದರ ನಡುವೆ ಸಣ್ಣ ಬಜೆಟ್ ನ ಹೊಸಬರ ಸಿನಿಮಾಗಳು ಕಳೆದುಹೋಗಬಹುದೇನೋ ಎಂಬ ಭಯವಿತ್ತು. ಹಾಗಿದ್ದರೂ ಈ ವಾರ ಬಿಡುಗಡೆಯಾಗಿದ್ದ ಎರಡು ಸಿನಿಮಾಗಳು ಈಗ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ರಾಮ್ ಚರಣ್, ಮಯೂರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ವೀಲ್ ಚೇರ್ ರೋಮಿಯೋ ಎಂಬ ಸಿನಿಮಾ ಈಗ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಮೆಚ್ಚುಗೆಗೆ ಪಾತ್ರವಾಗಿದೆ. ಹೀರೋ ಎಂದರೆ ನಾಲ್ಕು ಡ್ಯಾನ್ಸ್, ಫೈಟ್ ಎಂದು ಹೀರೋಯಿಸಂ ತೋರಬೇಕು ಎನ್ನುವ ಸಿದ್ಧಸೂತ್ರದ ಹೊರತಾದ ಕತೆ ಇದಾಗಿದ್ದು, ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿದೆ.
ಇನ್ನು, ರಂಗಾಯಣ ರಘು, ತಬಲಾ ನಾಣಿ ಸೇರಿದಂತೆ ಹಲವು ಕಲಾವಿದರ ಸಂಗಮವಾಗಿದ್ದ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಹಾಕಿದ ಬಂಡವಾಳಕ್ಕೆ ಈ ಎರಡೂ ಸಿನಿಮಾಗಳೂ ಮೋಸ ಮಾಡಲ್ಲ. ಈ ಮೂಲಕ ಕತೆ ಚೆನ್ನಾಗಿದ್ದರೆ ಪ್ರೇಕ್ಷಕ ಖಂಡಿತಾ ಇಷ್ಟಪಟ್ಟು ನೋಡುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿವೆ.