Select Your Language

Notifications

webdunia
webdunia
webdunia
webdunia

ಕೊನೆಗೂ ಜಂಟಿಯಾಗಲು ತೀರ್ಮಾನಿಸಿದ ನಟ ಜೆಕೆ: ಹುಡುಗಿ ಯಾರು ಗೊತ್ತೇ?

ಕೊನೆಗೂ ಜಂಟಿಯಾಗಲು ತೀರ್ಮಾನಿಸಿದ ನಟ ಜೆಕೆ: ಹುಡುಗಿ ಯಾರು ಗೊತ್ತೇ?
ಬೆಂಗಳೂರು , ಸೋಮವಾರ, 30 ಮೇ 2022 (16:49 IST)
ಬೆಂಗಳೂರು: ಕಿರುತೆರೆ, ಸ್ಯಾಂಡಲ್ ವುಡ್ ನಲ್ಲಿ ನಟಿಸಿ, ಫ್ಯಾಶನ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಈಗ ಮದುವೆಯಾಗಲು ಹೊರಟಿದ್ದಾರೆ.

ಇಷ್ಟು ದಿನ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಜೆಕೆಗೆ ಪ್ರಶ್ನೆ ಮಾಡುತ್ತಲೇ ಇದ್ದರು. ಇದೀಗ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಜೆಕೆ ಮದುವೆಯಾಗಲು ಹೊರಟಿದ್ದು, ಅವರು ಮದುವೆಯಾಗುತ್ತಿರುವ ಹುಡುಗಿಯೂ ಫ್ಯಾಶನ್ ಲೋಕದ ಪ್ರತಿಭಾವಂತೆಯೇ ಎನ್ನುವುದು ತಿಳಿದುಬಂದಿದೆ.

ಖ್ಯಾತ ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತ ಜೊತೆ ಜೆಕೆ ಮದುವೆಯಾಗಲಿದ್ದಾರೆ. ಜೆಕೆ ಜೊತೆಗಿರುವ ಫೋಟೋ ಪ್ರಕಟಿಸಿರುವ ಸಮಂತಾ ‘ಲೈಫ್ ಲೈನ್’ ಎಂದು ಬರೆದುಕೊಂಡಿದ್ದಾರೆ. ಕೆಲವು ದಿನಗಳ ಮೊದಲು ಇಬ್ಬರೂ ಮಿತ್ರರ ಜೊತೆ ಗೋವಾಕ್ಕೆ ತೆರಳಿರುವ ಫೋಟೋಗಳು ವೈರಲ್ ಆಗಿತ್ತು. ಆಗಲೇ ಜೆಕೆ ಅಪರ್ಣಾ ಜೊತೆಗಿರುವ ಫೋಟೋ ಪ್ರಕಟಿಸಿ ‘ನಿನ್ನನ್ನು ಪಡೆದಿರುವುದಕ್ಕೆ ಅದೃಷ್ಟ ಮಾಡಿದ್ದೆ’ ಎಂದು ಬರೆದುಕೊಂಡಿದ್ದರು. ಆಗಲೇ ಈಕೆ ಜೆಕೆ ಹುಡುಗಿ ಎಂದು ಎಲ್ಲರಿಗೂ ಅನುಮಾನ ಬಂದಿತ್ತು. ಈಗಂತೂ ಸ್ವತಃ ಅಪರ್ಣಾ ಕೂಡಾ ಇಂತಹದ್ದೊಂದು ಪೋಸ್ಟ್ ಮಾಡಿದ ಮೇಲೆ ಇಬ್ಬರ ಸಂಬಂಧ ಕನ್ ಫರ್ಮ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಲ್ ಸಿಂಗ್ ಚಡ್ಡಾ ಟ್ರೈಲರ್ ನಲ್ಲಿ ಸೈಡ್ ಲೈನ್ ಆದ ನಾಗಚೈತನ್ಯ: ಫ್ಯಾನ್ಸ್ ಗರಂ