Publish Date: Mon, 30 May 2022 (10:41 IST)
Updated Date: Mon, 30 May 2022 (10:44 IST)
ಬೆಂಗಳೂರು: ಬಿಜೆಪಿಯಿಂದ ಈ ಬಾರಿ ರಾಜ್ಯ ಸಭೆ ಟಿಕೆಟ್ ಪಡೆದಿರುವ ನವರಸನಾಯಕ ಜಗ್ಗೇಶ್ ಖುಷಿಯಾಗಿದ್ದು, ಇದೆಲ್ಲಾ ರಾಯರ ಪವಾಡ ಎಂದಿದ್ದಾರೆ.
ರಾಜ್ಯದಿಂದ ಹಾಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಚ್ಚರಿಯೆಂಬಂತೆ ನವರಸನಾಯಕ ಜಗ್ಗೇಶ್ ಗೆ ಟಿಕೆಟ್ ನೀಡಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಮನ್ನಣೆ ನೀಡಬೇಕೆನ್ನುವ ಉದ್ದೇಶದಿಂದ ಜಗ್ಗೇಶ್ ಗೆ ಟಿಕೆಟ್ ನೀಡಲಾಗಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗ್ಗೇಶ್ ಇಷ್ಟು ದಿನ ಪ್ರಾಮಾಣಿಕವಾಗಿ ಕಲಾಸೇವೆ ಮಾಡಿಕೊಂಡು ಬಂದಿರುವ ನನಗೆ ರಾಷ್ಟ್ರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ರಾಯರ ಪವಾಡ ಎಂದೇ ಭಾವಿಸಿರುವೆ. ನನ್ನ ಪ್ರತಿ ಹೆಜ್ಜೆಯಲ್ಲೂ ರಾಯರಿರುತ್ತಾರೆ ಎನ್ನುವುದು ನಂಬಿಕೆ ಎಂದಿದ್ದಾರೆ.