Publish Date: Tue, 31 May 2022 (08:40 IST)
Updated Date: Tue, 31 May 2022 (09:03 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಬಹುಭಾಷಾ ಸಿನಿಮಾ ಕ್ರಾಂತಿ ಸಿನಿಮಾ ಬಗ್ಗೆ ಜೂನ್ ತಿಂಗಳ ಅಂತ್ಯಕ್ಕೆ ಅಪ್ ಡೇಟ್ ಸಿಗುವ ಸಾಧ್ಯತೆಯಿದೆ.
ಚಿತ್ರದ ಮಾತಿನ ಭಾಗದ ಬಹುತೇಕ ಚಿತ್ರೀಕರಣ ಪೂರ್ತಿಯಾಗಿದ್ದು, 3-4 ಹಾಡುಗಳ ಚಿತ್ರೀಕರಣ ಬಾಕಿಯಿದೆ ಎನ್ನಲಾಗಿದೆ. ಹೀಗಾಗಿ ಜೂನ್ ತಿಂಗಳ ಅಂತ್ಯಕ್ಕೆ ಚಿತ್ರದ ಬಗ್ಗೆ ಅಪ್ ಡೇಟ್ ಸಿಗುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಈಗಾಗಲೇ ಹೈದರಾಬಾದ್, ಬೆಂಗಳೂರು ಮತ್ತು ಮೈಸೂರಿನ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ದರ್ಶನ್ ಗೆ ನಾಯಕಿಯಾಗಿ ರಚಿತಾ ರಾಮ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್ ಸೇರಿದಂತೆ ಘಟಾನುಘಟಿಗಳ ತಾರಾಗಣ ಸಿನಿಮಾದಲ್ಲಿದೆ.